ಚಿತ್ತಾಪುರ: ಪ್ರತಿ ವರ್ಷವು ಸಂಪ್ರದಾಯದAತೆ ಪ್ರತಿಷ್ಟಾಪಿಸುವ ವಿಜ್ಞೇಶ್ವರನ ಸ್ಥಾಪನೆಯಿಂದ ಸರ್ವಧರ್ಮಿಯರಲ್ಲಿ ಭಾಂದವ್ಯ ಗಟ್ಟಿಯಾಗಲು ಸಹಕಾರಿಯಾಗುತ್ತದೆ ಮತ್ತು ಮನಸ್ಸಿಗೆ ಶಾಂತಿ, ಸಮಾಧಾನ, ನೆಮ್ಮದಿ ಲಭಿಸಲಿದೆ ಎಂದು ಪುರಸಭೆ ವಿರೋಧ ಪಕ್ಷದ ನಾಯಕ ನಾಗರಾಜ ಭಂಕಲಗಾ ಅವರು ಹೇಳಿದರು.
ಪಟ್ಟಣದ ಸಂತೊಷ ನಗರದಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳಿಗೆ ಉಚಿತ ಆರೊಗ್ಯ ತಪಾಸಣೆ ಶಿಬಿರ, ರಂಗೊಲಿ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಓಣಿಯ ಎಲ್ಲರೂ ಒಂದಡೇ ಕೂಡಿಕೊಂಡು ವಿವಿಧ ಸ್ಪರ್ಧೇಗಳನ್ನು ಏರ್ಪಡಿಸುವದರಿಂದ ಅದಕ್ಕೆ ವಿಶೇಷ ಮೆರಗು ಮೂಡುತ್ತದೆ ಅಲ್ಲದೇ ಅವರಲ್ಲಿ ಪ್ರತಿಭೆಯನ್ನು ಪ್ರದರ್ಶಿಸಲು ಇಂತಹ ವೇದಿಕೆಗಳು ಸಹಕಾರಿಯಾಗಲಿವೆ. ಎಲ್ಲರೂ ಸಹಬಾಳ್ವೆಯಿಂದ ಶಾಂತಿಯುತವಾಗಿ ಇಂತಹ ಹಬ್ಬಗಳನ್ನು ಆಚರಿಸಿದಾಗ ಮಾತ್ರ ಹಬ್ಬಕ್ಕೆ ವಿಶೇಷ ಮೆರಗು ಬರುತ್ತದೆ ಎಂದು ಹೇಳಿದರು.
ಪತ್ರಕರ್ತರಾದ ಕಾಶಿನಾಥ ಗುತ್ತೆದಾರ ಅವರು ಮಾತನಾಡಿ ಗಣೇಶ ಮೂರ್ತಿ ಪ್ರತಿಷ್ಟಾಪನೆಯಿಂದ ಸರ್ವರೂ ಒಂದುಗೂಡಿ ಆಚರಿಸುವದು ಹಮ್ಮೆಯ ವಿಷಯವಾಗಿದೆ. ಪ್ರತಿಷ್ಟಾಪಿಸಿದ ದಿನದಿಂದ ೫ ದಿನ ಎಲ್ಲಾರೂ ಕೂಡಿಕೊಂಡು ದಿನಕೊಂದು ಕಾರ್ಯಕ್ರಮಗಳನ್ನು ಮಾಡಿ ಎಲ್ಲರೂ ಸೌಹಾರ್ದದಿಂದ ಭಾಗವಹಿಸುವದರಿಂದ ಅವರಲ್ಲಿನ ಬಾಂದ್ಯವ್ಯ ಇನ್ನು ಗಟ್ಟಿಯಾಗಲು ಇಂತಹ ವೇದಿಕೆಗಳು ತುಂಬಾ ಸಹಕಾರಿಯಾಗುತ್ತದೆ. ಪ್ರತಿವರ್ಷವೂ ಹೊಸ ಹೊಸ ಯೊಜನೆಗಳೊಂದಿಗೆ ಇಂತಹ ಕಾರ್ಯಕ್ರಮಗಳು ನಡೆಯಬೇಕು ಎಂದು ಹೇಳಿದರು.
ವಿನಾಯಕ ಬಳಗದ ಮಲ್ಲಿಕಾರ್ಜುನ ಮುಡಬೂಳಕರ್, ಮುಖಂಡರಾದ ಶರಣಪ್ಪ ನಾಟೀಕಾರ, ನಾಗಪ್ಪ ಕಲ್ಲಕ್ಕ್, ಚಂದ್ರಶೇಖರ ಬಳ್ಳಾ, ಡಾ, ಸಂತೊಷ ಯಲ್ಲೇರಿ ವೇದಿಕೆಯಲ್ಲಿದ್ದರು. ಲಕ್ಮೀಕಾಂತ ರಾಜೊಳಿ, ಮಲ್ಲಿಕಾರ್ಜುನ ಅಲ್ಲೂರಕರ್, ದೇವಕಮ್ಮ ರಾಜೋಳ್ಳಿ, ದತ್ತು ಗುತ್ತೆದಾರ, ಬಸ್ಸು ದಿಗ್ಗಾಂವ, ದುರ್ಗಾ ಪ್ರಸಾದ, ಸುರೇಶ ಯಾದಗಿರ, ಅಭಯ್ ಮುಡಬೂಳಕರ್, ಶೃತಿ, ರೇಣುಕಾ, ಶ್ವೇತಾ, ಮಲ್ಲಮ್ಮ ಏರಿ, ಸಹನಾ ಬುರ್ಲಿ, ವಿಜಯೇಂದ್ರ ಇತರರು ಇದ್ದರು.
ಸಮರ್ಥ ಪ್ರಾಥ೯ನೆ ಗೀತೆ ಹಾಡಿದರು. ನಿರೂಪಣಿ: ರುದ್ರಪ್ಪ ತಾವರೆ ಮಾಡಿದರು. ಪೂಜಾ ನಾಟಿಕಾರ ಸ್ವಾಗತಿಸಿದರು.