ಚಿತ್ತಾಪುರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೊಗದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಡಿ ಪ್ರಾರಂಭವಾಗಿರುವ ಜಾತಿ ಗಣತಿಯ ಕಾಲಂನಲ್ಲಿ ಕುರುಬ ಎಂಬುದಾಗಿ ಬರೆಯಿಸಿ ಎಂದು ಕುರುಬ ಸಮಾಜದ ತಾಲೂಕು ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪೂಜಾರಿ ಮನವಿ ಮಾಡಿದ್ದಾರೆ.
ಕಾಲಂ ನಂ ೮ ರಲ್ಲಿ ಧರ್ಮ ಹಿಂದೂ ಎಂದು ಕಾಲಂ ನಂ ೯ ರಲ್ಲಿ ಜಾತಿ ಕುರುಬ ಹಾಗೂ ಕಾಲಂ ನಂ ೧೦ರಲ್ಲಿ ಉಪಜಾತಿ ಇಲ್ಲಾ ಹಾಗೂ ೧೧ ನೇ ಕಾಲಂ ನಲ್ಲಿ ಪರ್ಯಾಯ ಪದ ಸಮಾನಾರ್ಥಕ ಜಾತಿ ಗೊಂಡ ಎಂದು ನಮೂದಿಸಬೇಕು ಎಂದು ಅವರು ಕೊರಿದ್ದಾರೆ. ಯಾವುದೇ ಗೊಂದಲಕ್ಕೆ ಒಳಗಾಗದೇ ಗಣತಿದಾರರು ಮನೆಗೆ ಬಂದಾಗ ಎಲ್ಲರೂ ಕುರುಬ ಅಂತಲೇ ಬರೆಯಿಸಿ ಖಾತ್ರಿ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಜಾತಿ ಕಾಲಂ ನಲ್ಲಿ ಕುರುಬ ಎಂದು ಬರೆಯಿಸಿ
