ಜಯಘೋಷಯೊಂದಿಗೆ ರಥ ಎಳೆದರು ಮಹಿಳೆಯರು

ಜಾತ್ರೆಗಳಲ್ಲಿ ತೇರು ಎಳೆಯುವುದು ಸಮಾನ್ಯವಾಗಿ ಪುರುಷರಿಗೆ  ನೋಡಿದ್ದವೆ ಆದರೆ ಚಿಂಚೋಳಿ ತಾಲೂಕಿನ ಐನಾಪೂರ ಗ್ರಾಮದ ನಂದಿ ಬಸವೇಶ್ವರ ದೇವಸ್ಥಾನದ 18ನೇ ಜಾತ್ರಾ ಮಹೋತ್ಸವ ಮಲ್ಲಯ್ಯ ಶಾಸ್ತ್ರಿ, ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು ರಥೋತ್ಸವದಲ್ಲಿ ಗ್ರಾಮದ ಮಹಿಳೆಯರಿಗೆ 1001 ಮಹಿಳೆಯರಿಗೆ ಉಡಿ ತುಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ನಂತರ ನಂದಿ ಬಸವೇಶ್ವರ ರಥವನ್ನು ಪುರಷರಿಗೆ ದೂರವಿಟ್ಟು  ಮಹಿಳೆಯರಿಂದಲೇ ರಥವನ್ನು ಎಳೆಯುವ ವಿಶೇಷವಾಗಿತ್ತು.  ಶ್ರದ್ಧ ಭಕ್ತಿಯಿಂದ ರಥ ಎಳೆಯುತ್ತಿರುವ ಮಹಿಳೆಯರು, ದೇವರಿಗೆ ಪೂಜೆ ಸಲ್ಲಿಸುತ್ತಿರುವ ಭಕ್ತೆಯರು. ಇಂತದೊಂದು ದೃಶ್ಯ ಕಂಡು ಬಂದದ್ದು ಐನಾಪೂರ  ಗ್ರಾಮದಲ್ಲಿ ರಾಜ್ಯದ ಯಾವುದೇ ಮೂಲೆಯಲ್ಲಿ ಮಾಡದಂತ ವಿಶೇಷ ಆಚರಣೆ ಸಂಪ್ರದಾಯವನ್ನ ಈ ಗ್ರಾಮದ ಜನರು ಆಚರಿಸಿಕೊಂಡು ಬಂದಿದ್ದಾರೆ ಐನಾಪೂರ ಚಂದನಕೇರಾ, ಸೇರಿದಂತೆ ಅನೇಕ ಗ್ರಾಮಗಳ ಭಕ್ತರು ಭಾಗವಹಿಸಿ ರಥ ಎಳೆದರು ರಥ ಮುಂದೆ ಹೊಗದಂತೆ ಭಕ್ತರು. ಹೂ, ಉತ್ತುತ್ತಿ, ಬಾಳೆ ಹಣ್ಣು ತೇರಿನ ಕಡೆಗೆ ಎಸೆದು ಧನ್ಯತೆ ಮೆರೆದರು ಬಾಜಾ ಭಜಂತ್ರಿ,   ರಥೋತ್ಸವ ಜರಗಿತ್ತು ಪ್ರತಿವರ್ಷ ಜರುಗುವ ರಥೋತ್ಸವದಲ್ಲಿ ಗ್ರಾಮದ ಮುತ್ತೈದೆಯರೇ ಎಳೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ ಇದಕ್ಕಾಗಿ ಜಾತ್ರೆಯ ನಿಮಿತ್ತ ಪ್ರತಿವರ್ಷ ಎಷ್ಟೇ ದೂರದಲ್ಲಿದ್ದರೂ ಬಂದು ಪಾಲ್ಗೊಳ್ಳುತ್ತಾರೆ ಎಂದು ಮಲ್ಲಯ್ಯ ಶಾಸ್ತ್ರಿ  ಹೇಳಿದರು ಸಾವಿರಾರು ಜನಸಂಖ್ಯೆಯಲ್ಲಿ ನಂದಿ ಬಸವೇಶ್ವರ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದರು

Leave a Reply

Your email address will not be published. Required fields are marked *

error: Content is protected !!