ಚಿಂಚೋಳಿಯ ಪೊಲೀಸ್ ಠಾಣೆಯಲ್ಲಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ಜರಗಿತು. ಸಭೆ ಉದ್ದೇಶಿಸಿ ಚಿಂಚೋಳಿಯ ಪೊಲೀಸ್ ಠಾಣೆಯ ಸಿಪಿಐ ಕಪಿಲದೇವ್, ಅವರು ಮಾತನಾಡಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಈ ಸಭೆ ಕರೆಯಲಾಗಿದ್ದು ಚಿಂಚೋಳಿ ತಾಲೂಕ ಬಹಳಷ್ಟು ಶಾಂತಿಯತೆಯಿಂದ ಜನರು ಇರುತ್ತಾರೆ ಯಾಕೆಂದರೆ ನಾನು ಒಂದು ವರ್ಷ ಆಯ್ತು ನಾನು ಇಲ್ಲಿ ಸಿಪಿಐ ಆಗಿ ಸೇವೆ ಮಾಡುತ್ತಿದ್ದು ಚಿಂಚೋಳಿಯಲ್ಲಿ ನನ್ನ ವ್ಯಾಪ್ತಿಯಲ್ಲಿ ಯಾವುದೇ ಒಂದು ಗಲಾಟೆ ಯಾವುದು ಒಂದು ಕೋಮುಗಲಭೆ ಆಗಿಲ್ಲ ಅದೇ ರೀತಿ ಚಿಂಚೋಳಿಯಲ್ಲೂ ಕೂಡ ಮುಂಬರುವ ದಿನಗಳಲ್ಲಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬವೂ ಕೂಡ ಶಾಂತಿಯುತ ರೀತಿಯಿಂದ ಆಚರಣೆ ಮಾಡಬೇಕು ಮತ್ತು ಸರ್ಕಾರ ನೀಡಿರುವ ಆದೇಶಗಳನ್ನು ಎಲ್ಲಾ ಗಣೇಶ್ ಮಂಡಳಿಯ ಅಧ್ಯಕ್ಷರು ತಪ್ಪದೇ ಸರ್ಕಾರ ಸರ್ಕಾರದಿಂದ ಪರವಾನಿಗೆ ಪಡೆದು ಗಣೇಶ್ ಮೂರ್ತಿಯನ್ನು ಸ್ಥಾಪನೆ ಮಾಡಬೇಕು ಪುರಸಭೆ ಜೆಸ್ಕಾಂ ಫೈರ್ ಇಂಜಿನ್ ಅವರ ಅನುಮತಿ ಪಡೆದು ಗಣೇಶ್ ಮೂರ್ತಿ ಸ್ಥಾಪನೆ ಮಾಡಬೇಕು ಗಣೇಶ್ ಪ್ರತಿಷ್ಠಾಪನೆ ಮಾಡಲು ಅನುಮತಿ ನೀಡುವುದಕ್ಕಾಗಿ ಇಲಾಖೆಯ ಅಧಿಕಾರಿಗಳು ನಿಮಗೆ ಮಾತನಾಡಿ ಚಿಂಚೋಳಿ ಪುರಸಭೆಯಲ್ಲಿ ಕಾರ್ಯದಲ್ಲಿ ಜೆಸ್ಕಾಂ ಫೈರ್ ಇಂಜಿನ್ ಪರ್ಮಿಷನ್ ಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ ಹಾಗೂ ಈದ್ ಮಿಲಾದ ಹಬ್ಬ ಗಣೇಶ ಹಬ್ಬಕ್ಕೂ ಯಾವುದೇ ಒಂದು ಡಿಜೆ ಪರ್ಮಿಷನ್ ಇರುವುದಿಲ್ಲ ಹಾಗಾಗಿ ತಾವೆಲ್ಲರೂ ಸರ್ಕಾರ ಆದೇಶವನ್ನು ಪಾಲಿಸಿ ನಮ್ಮ ಪೊಲೀಸ್ ಇಲಾಖೆಗೆ ಸಹಕರಿಸಬೇಕಾಗಿ ವಿನಂತಿಸಿಕೊಂಡಿದ್ದರು ಸಭೆಯಲ್ಲಿ ಚಿಂಚೋಳಿಯ ಪೊಲೀಸ್ ಠಾಣೆಯ ಪಿಎಸ್ಐ ಗಂಗಮ್ಮ, ಫೈರ್ ಇಂಜಿನ್ ಅಧಿಕಾರಿಗಳಾದ ಹಸನ್, ಪುರಸಭೆ ಇನ್ಸ್ಪೆಕ್ಟರ್ ಹಾಗೂ ಜಸ್ಕಾಂ ಇಲಾಖೆಯ ಸಿಬ್ಬಂದಿ ಮತ್ತು ಅನೇಕ ವಿವಿಧ ಪಕ್ಷದ ಮುಖಂಡರು ಮತ್ತು ಗಣೇಶ ಮಂಡಳಿಯ ಅಧ್ಯಕ್ಷರು ಹಾಗೂ ಮುಸ್ಲಿಂ ಕಮಿಟಿಯ ಸರ್ವ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು
ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ
