ಕಲಬುರಗಿ- ಚಿಂಚೋಳಿ ರಾಜ್ಯ ಹೆದ್ದಾರಿ ಸಂಚಾರ ಸ್ಥಗೀತ
ಕಲಬುರಗಿ : ಹೊರಹರಿವು 46000 cusecs ನಿಂದ 55000 ಕ್ಯೂಸೆಕ್ ಗೆ ಹೆಚ್ಚಿಸಲಾಗಿದೆ.
ಬೆಣ್ಣೆತೋರ ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಸತತವಾಗಿ ಮಳೆ ಬರುತ್ತಿರುವುದರಿಂದ ಜಲಾಶಯವು 100℅ ತುಂಬಿರುತ್ತದೆ. ಸದ್ಯ ಒಳಹರಿ 46000 cusecs ಇದ್ದು ಹೊರಹರಿವು 55000 ಗೆ ಹೆಚ್ಚಿಸಲಾಗಿದೆ. ಎಂದು ತಹಸೀಲ್ದಾರು ನಾಗಯ್ಯ ಹಿರೇಮಠ ಅವರು ತಿಳಿಸಿದ್ದಾರೆ.
ನದಿಗೆ ಒಳಹರಿವು ಹೆಚ್ಚಾಗಿದ್ದು ಇನ್ನು ಹೆಚ್ಚಿನ ನೀರು ನದಿಗೆ ಹರಿಸಲಾಗುವುದು ಆದ್ದರಿಂದ ನದಿ ದಂಡಿಗೆ ಜನ ಜಾನುವಾರುಗಳು ಹೋಗದಂತೆ ಮುನ್ನೆಚ್ಚರಿಕೆ ವಹಿಸಲು ಈ ಮೂಲಕ ಕೋರಲಾಗಿದೆ .
ಶಹಾಬಾದ ಉಪವಿಭಾಗದ ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರು, ಕಣಸೂರ ಗ್ರಾಮ ಸೇರಿದಂತೆ ಪ್ರಮುಖ ಸೇತುವೆಗಳಿಗೆ ಭೇಟಿ ನೀಡಿ ಕಲಬುರಗಿ- ಚಿಂಚೋಳಿ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ. ಕಣಸೂರ ಗ್ರಾಮಕ್ಕೆ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.