ಕಲಬುರಗಿ ಪರಮ ಪೂಜ್ಯ ಡಾ. ಶರಣಬಸಪ್ಪ ಅಪ್ಪ 8ನೇ ಮಹಾದಾಸೋಹ ಪೀಠಾಧಿಪತಿಗಳು ಶರಣಬಸವೇಶ್ವರ ಸಂಸ್ಥಾನ, ಅವರು ನಿನ್ನೆ ನಿಧನ ಹೊಂದಿದ್ದ ಕಾರಣ ಚಿಂಚೋಳಿ ತಾಲೂಕ ವೀರಶೈವ ಲಿಂಗಾಯತ ಸಮಾಜ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಪರಮ ಪೂಜ್ಯ ಡಾ. ಶರಣಬಸಪ್ಪ ಅಪ್ಪ, ಭಾವಚಿತ್ರಕ್ಕೆ ಲೋಕೋಪಯೋಗಿ ಇಲಾಖೆಯ ಕಿರಿಯ ಸಹಾಯಕರ ಗಿರಿರಾಜ್ ಸಜ್ಜನ್, ಅವರು ಪೂಜೆ ಮಾಡಿದರು ಕಾರ್ಯಕ್ರಮ ಉದ್ದೇಶಿಸಿ ವೀರಶೈವ ಲಿಂಗಾಯತ್ ಸಮಾಜದ ತಾಲೂಕ ಅಧ್ಯಕ್ಷರಾದ ಸಂಜೀವ ಕುಮಾರ್ ಪಾಟೀಲ, ಅವರು ಮಾತನಾಡಿ ಪೂಜ್ಯ ಡಾ. ಶರಣಬಸಪ್ಪ ಅಪ್ಪ, ಅವರು 8ನೇ ಮಹಾದಾಸೋಹ ಪೀಠಾಧಿಪತಿಗಳು ಆಗಿ ಕಲ್ಯಾಣ ಕರ್ನಾಟಕದ ಜನರಿಗೆ ವಿದ್ಯಾ ದಾಸೋಹ ಮತ್ತು ಅನ್ನದಾಸೋಹ ಹಾಗೂ ವೀರಶೈವ ಲಿಂಗಾಯತ ಸಮಾಜದಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಸುಭಾಷ್ ಚಂದ್ರ ಎಂಪಳ್ಳಿ, ರವೀಂದ್ರ ಬಂಡೆಪ್ಪನೋರ್, ವೀರೇಶ್ ದೇಸಾಯಿ, ಶಿವಶರಣಪ್ಪ ಡೈಂಗಿ, ಸುರೇಶ ಬಾಟಗಿರಿ ಅಣ್ಣವರ, ನಾಗೇಂದ್ರಪ್ಪ ಬಿರಾದಾರ ಅಣ್ಣವರ, ವಿಜಯ್ ಕುಮಾರ್ ಬೆಳಕೇರಿ, ಚಂದ್ರಶೇಖರ್ ಪಾರ, ಮಲ್ಲಿನಾಥ್ ಮೇಲಗಿರಿ, ದೇಶಮುಖ್ ಬಿರಾದರ್, ವಿವೇಕ್ ಪಾಟೀಲ, ನಾಗರಾಜ್ ಸೀಳಿನ, ಅಲ್ಲಮಪ್ರಭು ಮಡಪತಿ, ಚೇತನ್ ಹುಡದಳ್ಳಿ, ಸುರೇಶ್ ಕಲ್ಲೂರ್ಕರ್, ನಾಗೇಶ್ ಹೂಗಾರ, ನಮ್ಮ ಕರ್ನಾಟಕ ಸೇನೆಯ ತಾಲೂಕ ಸಂಚಾಲಕರದ ಸುಧಾಕರ್ ಗೌಡ, ಇವರು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಶ್ರದ್ಧಾಂಜಲಿ ಕಾರ್ಯಕ್ರಮ
