
ಸಂಘಟಿತ ಹೋರಾಟದಿಂದ ಮಾತ್ರ ಜಯಸಾಧ್ಯ:ಮಹೇಶ್ ಗೌಡ ಸುಬೇದಾರ್
ವಡಗೇರಾ: ರೈತ ಸಂಘಟನೆಯ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ರೈತರ ಸಮಸ್ಯೆಗಳ ಕುರಿತಂತೆ ಪ್ರಾಮಾಣಿಕವಾಗಿ ನ್ಯಾಯ ಕೊಡಿಸುವ ಕೆಲಸ ಮಾಡುವಂತೆ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯಧ್ಯಕ್ಷರಾದ ಮಹೇಶ್ ಗೌಡ.ಎಂ.ಸುಬೇದಾರ್ ಹೇಳಿದರು.ಶಹಾಪುರ ನಗರದಲ್ಲಿರುವ ರಾಜ್ಯ ರೈತ ಸಂಘ ಹಸಿರು ಸೇನೆ ಕಲ್ಯಾಣ ಕರ್ನಾಟಕ ಕಾರ್ಯಾಲಯದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ (ಚೂನಪ್ಪ ಪೂಜಾರಿ ಬಣದ) ವಡಗೇರಾ ತಾಲೂಕು ಕಾರ್ಯದರ್ಶಿಯನ್ನಾಗಿ ಬಸನಗೌಡ ಮಾಲಿ ಪಾಟೀಲ್ ತೇಕರಾಳ ರವರನ್ನು ನೇಮಕ ಮಾಡಿ ಅವರು ಮಾತನಾಡಿದರು.ಸಂಘಟಿತ ಹೋರಾಟದಿಂದ ಮಾತ್ರ…