ಸಿದ್ಧರಾಮ ಶಿವಯೋಗಿಗಳ ೭೫ ನೇ ಪುಣ್ಯಾರಾಧನೆ

ಜೇವರ್ಗಿ : ತಾಲೂಕಿನ ಶಖಾಪುರ ಎಸ್.ಎ ಗ್ರಾಮದ ಸದ್ಗುರು ವಿಶ್ವಾರಾಧ್ಯ ತಪೋವನ ಮಠದ ಲಿಂ. ಸಿದ್ಧರಾಮ ಶಿವಯೋಗಿಗಳ ೭೫ ನೇ ಪುಣ್ಯಾರಾಧನೆ ಹಾಗೂ ಧಾರ್ಮಿಕ ಸಭೆಯನ್ನು ೧೨ ಭಾನುವಾರದಂದು ಶ್ರೀಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಪೀಠಾಧಿಪತಿ ಡಾ. ಸಿದ್ಧರಾಮ ಶಿವಾಚಾರ್ಯರು ತಿಳಿಸಿದ್ದಾರೆ. ಪುಣ್ಯಾರಾಧನೆ ನಿಮಿತ್ತ ಶ್ರೀಮಠದಲ್ಲಿ ನಡೆಯುತ್ತಿರುವ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ೧೦ ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಲಿದ್ದಾರೆ. ಪ್ರಸಾದಕ್ಕೆ ೩೫ ಕ್ವಿಂಟಲ್ ಜೋಳ ಮತ್ತು ಸಜ್ಜಿ ರೊಟ್ಟಿಗಳನ್ನು…

Read More

ಎಚ್ ಕೆ ಇ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶಿಕ್ಷಕರಿಗಾಗಿ ಐದು ದಿನಗಳ ಎಫ್ ಡಿ ಪಿ ಕಾರ್ಯಕ್ರಮ

ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಕ್ವಾಲಿಟಿ ಅಶ್ಯೂರೆನ್ಸ ಸೆಲ್ ಸಹಯೋಗದೊಂದಿಗೆ ಸಂಸ್ಥೆಯ ಶಿಕ್ಷಕರಿಗಾಗಿ ಗಣಕಯಂತ್ರ ಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ಕುರಿತಾಗಿ ಐದು ದಿನಗಳ ಕಾಲ ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ ಸಂಸ್ಥೆಯ ಪಾಲಿಟೆಕ್ನಿಕ್ ಕಾಲೇಜು ಹಾಗೂ ಎಂ ಎಸ್ ಇರಾಣಿ ಪದವಿ ಮಹಾವಿದ್ಯಾಲಯದ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಆಡಳಿತ ಮಂಡಳಿ ಸದಸ್ಯರು ಹಾಗೂ ಸಂಚಾಲಕರಾದ ನಾಗಣ್ಣ ಘಂಟಿ ಮಾತನಾಡಿ ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ಸಿಬ್ಬಂದಿಗೆ ಕಂಪ್ಯೂಟರ್ ಜ್ಞಾನ ಕೃತಕ ಬುದ್ಧಿಮತ್ತೆ ಅವಶ್ಯಕತೆ ಇದೆ…

Read More

ಮದ್ಯ, ಮಾದಕ ವ್ಯಸನಗಳ ವಿರುದ್ಧ ಜಾಗೃತಿ ಮೂಡಿಸಲು ಮಠಗಳು ಮುಂದಾಗಲು ಶರಣಪ್ಪ ಸಲಾದಪುರ ಕರೆ

ಯಾದಗಿರಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ತಮ್ಮ ಸ್ವಕ್ಷೇತ್ರಕ್ಕೆ ಭೇಟಿ ನೀಡಿದ ಶರಣಪ್ಪ ಸಲಾದಪುರ ವಿವಿಧ ಮಠಗಳಿಗೆ ಭೇಟಿ ನೀಡಿ, ಮದ್ಯಪಾನ ಹಾಗೂ ಮಾದಕವಸ್ತುಗಳ ವಿರುದ್ಧ ಮಠಕ್ಕೆ ಭೇಟಿ ನೀಡುವ ಭಕ್ತರಲ್ಲಿ ಜಾಗೃತಿ ಮೂಡಿಸಲು, ಮಠಗಳು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ. ಚರಬಸವೇಶ್ವರ ಗದ್ದುಗೆ ಸಂಸ್ಥಾನ ಮಠಕ್ಕೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾದ ಶರಣಪ್ಪ ಸಲಾದಪುರ ಅವರು ಭೇಟಿ ನೀಡಿ, ಶ್ರೀ ಶ್ರೀ ಶ್ರೀ ಪರಮಪೂಜ್ಯ ಬಸಯ್ಯ ತಾತ…

Read More

ಎಂ ಆರ್ ಎಂ ಸಿ ಯಲ್ಲಿ ಓರಿಯೆಂಟೆಶನ್ ಹಾಗೂ ವೈಟ್ ಕೊಟ್ ಸಮಾರಂಭ

ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 2025-26 ನೇ ಸಾಲಿನ ಎಂ ಬಿ ಬಿ ಎಸ್ ವಿದ್ಯಾರ್ಥಿಗಳಿಗೆ ಓರಿಯಂಟೆಶನ್ ಮತ್ತು ವೈಟ್ ಕೊಟ್ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭವನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ ಹಾಗೂ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ ಶರಣಗೌಡ ಪಾಟೀಲ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ವೈದ್ಯಕೀಯ ಮಹಾವಿದ್ಯಾಲಯದ ಸಂಚಾಲಕರು ಹಾಗೂ…

Read More

ಕ್ಷಯ ರೋಗದ ಬಗ್ಗೆ ಭಯ ಬೇಡ:ಡಾ. ಸಂಜೀವಕುಮಾರ್ 

ಸ್ವಸ್ಥ ನಾರಿ ಸಶಕ್ತ ಪರಿವಾರ : ಉಚಿತ ಪೌಷ್ಟಿಕ ಆಹಾರ ವಿತರಣೆ  ಸುರಪುರ : ಕ್ಷಯ ರೋಗವನ್ನು ಗುಣಪಡಿಸಬಹುದು ಯಾರು ಇದರ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ.ಸಂಜೀವಕುಮಾರ್ ರಾಯಚೂರಕರ್ ಮಾತನಾಡಿದರು.ತಾಲೂಕಿನ ಹೆಮನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನ ಕಾರ್ಯಕ್ರಮ ಯಾದಗಿರಿ ಹಾಗೂ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸುರಪುರ ಇವರುಗಳ…

Read More

ಒಂದೇ ಎಂಬ ಭಾವಬಂದಾಗ ಸದೃಡ ರಾಷ್ಟç ನಿರ್ಮಾಣ-ಅಗಸರ

ತಾಳಿಕೋಟೆ, ಎಲ್ಲ ಸಮುದಾಯದವರು ಜಾತಿ, ಮತ, ಪಂಥವೆನ್ನದೇ ನಾವೆಲ್ಲರೂ ಒಂದೇ ಎಂಬ ಭಾವ ಬೆಳೆಸಿಕೊಂಡಾಗ ಮಾತ್ರ ಬಲಿಷ್ಠ ರಾಷ್ಟçವಾಗಲು ಸಾದ್ಯವೆಂದು ರಾಷ್ಟಿçÃಯ ಸೇವಾ ಯೋಜನೆಯ ಜಿಲ್ಲಾ ಸಂಯೋಜನಾಧಿಕಾರಿಗಳಾದ ಗಂಗಾಧರ ಅಗಸರ ಹೇಳಿದರು. ಪಟ್ಟಣದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಿಂದ ಆಶ್ರಯ ಕಾಲೋನಿಯಲ್ಲಿ ಏಳು ದಿನಗಳ ಕಾಲ ಹಮ್ಮಿಕೊಂಡ ರಾಷ್ಟಿçÃಯ ಸೇವಾ ಯೋಜನೆಯ ವಿಶೇಷ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಧರ್ಮ. ಆಚಾರ ಸಂಸ್ಕಾರವನ್ನು ಯುವಕರು ಮೈಗೂಡಿಸಿಕೊಳ್ಳಬೇಕು. ದುಶ್ಚಟಗಳಿಗೆ ದಾಸರಾಗದೆ ಆರೋಗ್ಯದ ಕಡೆ…

Read More

ಶಿಕ್ಷಕರೆ ದೇಶದ ಶಿಲ್ಪಿಗಳು: ಸುರೇಶ ಗೌರೆ

ಆಳಂದ: ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾದದ್ದು, ಅವರು ವಿದ್ಯಾರ್ಥಿಗಳ ಜೀವನದ ನಿಜವಾದ ಶಿಲ್ಪಿಗಳು ಎಂದು ಕರ್ನಾಟಕ ಗೌರವ ಪತ್ರಿಕೆಯ ಸಂಪಾದಕ ಸುರೇಶ ಗೌರೆ ಹೇಳಿದರು. ತಾಲ್ಲೂಕಿನ ನಿಂಬರ್ಗಾ ಗ್ರಾಮದಲ್ಲಿ ‘ಕಲಬುರಗಿ ಪ್ರಭ’ ಪತ್ರಿಕೆ ವತಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕಿಯರಿಗೆ ಆಯೋಜಿಸಲಾದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕ ವೃತ್ತಿ, ಭವಿಷ್ಯದ ಕನಸುಗಳಿಗೆ ಪೋಷಣೆ ನೀಡುವ ಮಹಾನ್ ಸೇವೆ ಎಂದು ಅವರು ಬಣ್ಣಿಸಿದರು. ಫಾತಿಮಾ ಶೇಖ್ ಮತ್ತು ಸಾವಿತ್ರಿಬಾಯಿ ಫುಲೆ…

Read More

ಜನ್ಮದಿನ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ | ನಿತೀನ್ ಗುತ್ತೇದಾರ

ಕಲಬುರಗಿ  : ಎಲ್ಲರಿಗೂ ವಿನಮ್ರವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ. ಈ ವರ್ಷ ನಾನು ಜನ್ಮದಿನ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ. ಎಂದು ತಮ್ಮ ಫೇಸ್ ಖಾತೆಯಲ್ಲಿ ಮಾಜಿ ಜಿಪಂ ಅಧ್ಯಕ್ಷ ನಿತೀನ್ ಗುತ್ತೇದಾರ ಅವರು ಮಾಹಿತಿ ನೀಡಿದರು. ಮತಕ್ಷೇತ್ರದ ಹಾಗೂ ವಿವಿಧ ಕಡೆಗಳಲ್ಲಿ ಇರುವ ನನ್ನ ಪ್ರೀತಿಯ ಬಂಧುಗಳೆ, ಅಭಿಮಾನಿಗಳೇ, ಪಕ್ಷದ ಕಾರ್ಯಕರ್ತರೇ ನಿಮ್ಮೆಲ್ಲರ ಪ್ರೀತಿಯೇ ನನಗೆ ದೊಡ್ಡ ಆಶಿರ್ವಾದ ಮತ್ತು ಉಡುಗೊರೆ ಆಗಿದೆ. ನಿಮ್ಮ ಅಭಿಮಾನಕ್ಕೆ ನನ್ನ ಜೀವಮಾನವಿಡಿ ಋಣಿಯಾಗಿರುತ್ತೇನೆ. ಪ್ರತಿ ವರ್ಷವೂ ಸೆಪ್ಟೆಂಬರ್ 29 ರಂದು ನನ್ನ ಜನ್ಮದಿನದ ಪ್ರಯುಕ್ತ…

Read More

ಹೆಬ್ಬಾಳ ಆರೋಗ್ಯ ಕೇಂದ್ರದಲ್ಲಿ ಪ್ರಪ್ರಥಮ ಶಸ್ತ್ರಚಿಕಿತ್ಸೆ ಯಶಸ್ವಿ

ಕಲಬುರಗಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪಾ ಕ್ಯಾತನಾಳ ಹಾಗೂ ಮಾನ್ಯ ಆರ್‌ಸಿಹೆಚ್‌ಓ ಕಲಬುರಗಿ, ಮಾನ್ಯ ಟಿಹೆಚ್‌ಓ ಚಿತ್ತಾಪೂರ ರವರ ಮಾರ್ಗದರ್ಶನದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಹೆಬ್ಬಾಳ ತಾ||ಚಿತ್ತಾಪೂರ ಜಿ||ಕಲಬುರಗಿ ಆಸ್ಪತ್ರೆಯಲ್ಲಿ ಪ್ರಪ್ರಥಮವಾಗಿ ಸಿಜರಿಯನ್ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಗೊಂಡಿದ್ದು, ೩.೧ ಕೆ.ಜಿ ತೂಕದ ಹೆಣ್ಣು ಮಗು ಜನಿಸಿದ್ದು, ತಾಯಿ ಮತ್ತು ಮಗು ಸ್ವಸ್ಥವಾಗಿರುತ್ತಾರೆ. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಮೋಹ್ಮದ ಇರ್ಫಾನ ಇನಾಮದಾರ ರವರು ಆಸ್ಪತ್ರೆಯ ಶಸ್ತ್ರಚಿಕಿತ್ಸಾ ತಂಡದ ಡಾ. ನಂದಿನಿ ಪ್ರಸೂತಿ…

Read More

ಇನ್ನರ್ ವ್ಹಿಲ್ ಗುಲಬರ್ಗಾ ಸನ್‌ಸಿಟಿ ವತಿಯಿಂದ ‘ದೀಲ್ ಸೇ ದಾಂಡಿಯಾ’ ಗರಭಾ (ದಾಂಡಿಯಾ) ಕಾರ್ಯಕ್ರಮ

ಕಲಬುರಗಿ : ನಗರದ ಬಂಜಾರಾ ಭವನದಲ್ಲಿ ಇನ್ನರ್ ವ್ಹಿಲ್ ಗುಲಬರ್ಗಾ ಸನ್‌ಸಿಟಿ ವತಿಯಿಂದ ‘ದೀಲ್ ಸೇ ದಾಂಡಿಯಾ’ ಗರಭಾ (ದಾಂಡಿಯಾ) ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಇನ್ನರ್ ವ್ಹಿಲ್ ಗುಲಬರ್ಗಾ ಸನ್‌ಸಿಟಿ ವತಿಯಿಂದ ‘ದೀಲ್ ಸೇ ದಾಂಡಿಯಾ’ ಗರಭಾ (ದಾಂಡಿಯಾ) ಕಾರ್ಯಕ್ರಮವನ್ನು ಸುಮಾರು ೧೨ ವರ್ಷಗಳಿಂದ ಈ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಾ ಬಂದಿದ್ದಾರೆ. ಈ ಕಾರ್ಯಕ್ರಮದ ಮುಖಾಂತರ ದಾನಿಗಳು ಮತ್ತು ದಾಂಡಿಯಾ ಟಿಕೇಟಿನ ಹಣವನ್ನು ಪಡೆದು ಕಡು-ಬಡವರಿಗೆ ವೃದ್ಧಾಶ್ರಮ, ಅಂಧ ಮಕ್ಕಳಿಗೆ…

Read More
error: Content is protected !!