ನಿಮ್ಮ ಆಶೀರ್ವಾದವೇ ನನ್ನ ಏಳ್ಗೆಗೆ ಕಾರಣ-ಆನಂದಗೌಡ ಬಿರಾದಾರ
ಮುದ್ದೇಬಿಹಾಳ : ಅವಳಿ ಜಿಲ್ಲೆಯ ಸರ್ಕಾರಿ ನೌಕರರು,ಸ್ನೇಹಿತರು,ನನ್ನ ಗೆಳೆಯರ ಬಳಗದ ಆಶೀರ್ವಾದ,ಪೂರ್ವಜನ್ಮದ ಪುಣ್ಯವೇ ಇಂದು ನಾನು ರಾಜ್ಯಮಟ್ಟದ ಹುದ್ದೆಯಲ್ಲಿರುವುದಕ್ಕೆ ಕಾರಣ ಎಂದು ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿಯಮಿತದ ನೂತನ ನಿರ್ದೇಶಕ ಆನಂದಗೌಡ ಬಿರಾದಾರ ಹೇಳಿದರು. ಪಟ್ಟಣದ ಓಸ್ವಾಲ್ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು,ನೌಕರ ಬಾಂಧವರು ಹಾಗೂ ಆನಂದಗೌಡ ಗೆಳೆಯರ ಬಳಗದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ,ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಈ ಉನ್ನತ ಹುದ್ದೆ…


