ರಾಜ್ಯ ಮಟ್ಟದ ಅಬಾಕಸ್–ವೇದಿಕ್ ಮೆಥೆಮ್ಯಾಟಿಕ್ಸ್ ಶಾರ್ಪ್ ಪ್ರಶಸ್ತಿಗೆ ಬೀದರ್ ವಿದ್ಯಾರ್ಥಿನಿ ಆಯ್ಕೆ

ಬೀದರ:ಎಸ್.ಆರ್.ಜೆ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್, ಕಲಬುರ್ಗಿ ವತಿಯಿಂದ ಆಯೋಜಿಸಲಾದ ರಾಜ್ಯ ಮಟ್ಟದ ಅಬಾಕಸ್ ಹಾಗೂ ವೇದಿಕ್ ಮೆಥೆಮ್ಯಾಟಿಕ್ಸ್ ಶಾರ್ಪ್ ಪ್ರಶಸ್ತಿ ಕಾರ್ಯಕ್ರಮವು ದಿನಾಂಕ 25 ಜನವರಿ 2026ರಂದು ಕಲಬುರ್ಗಿಯ ಎಸ್. ನಿಜಲಿಂಗಪ್ಪ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಅಂಡ್ ರಿಸರ್ಚ್ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಬೀದರ್ ನ್ಯಾಷನಲ್ ಇಂಗ್ಲಿಷ್ ಮೀಡಿಯಂ ಪಬ್ಲಿಕ್ ಸ್ಕೂಲ್‌ನ 2ನೇ ತರಗತಿ ‘ಬಿ’ ವಿಭಾಗದ ವಿದ್ಯಾರ್ಥಿನಿ ಆರಾಧ್ಯ, ಸುನಿಲ್ ಸಂಗಮ್ ಅವರ ಪುತ್ರಿ, ಶಾರ್ಪ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಎಸ್.ಆರ್.ಜೆ ಸಂಸ್ಥೆಯು ಮಕ್ಕಳಿಗೆ ಅಬಾಕಸ್ ಹಾಗೂ ವೇದಿಕ್ ಮೆಥೆಮ್ಯಾಟಿಕ್ಸ್ನಲ್ಲಿ ಪರಿಣಾಮಕಾರಿ ತರಬೇತಿ ನೀಡುತ್ತಿದ್ದು, ಇದರಿಂದ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ತಿಳಿಸಲಾಗಿದೆ.ಈ ಕುರಿತು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಸಂಚಾಲಕ ಸುನಿಲ್ ಸಂಗಮ್ ಅವರು, ಈ ತರಬೇತಿಯನ್ನು ಸರ್ಕಾರಿ ಶಾಲೆಗಳ ಮಕ್ಕಳಿಗೂ ವಿಸ್ತರಿಸಬೇಕೆಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!