ಬೆಂಗಳೂರು : ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯನವರು ಮುಂದುವರಿಯುವುದು ಅಥವಾ ಬೇರೆ ಯಾರೇ ಮುಖ್ಯಮಂತ್ರಿ ಆಗುವುದು ಕಾಂಗ್ರೆಸ್ ಹೈಕಮಾಂಡ ಕೈಯಲ್ಲಿ ಹೊರತು ಸಚಿವ ಜಮೀರ ಅಹ್ಮದ ಖಾನ್ ಅಥವಾ ನನ್ನ ಕೈಯಲ್ಲಿ ಇಲ್ಲ ಎಂದು ಸಚಿವ ಎಂಬಿ ಪಾಟೀಲ ಅವರು ಹೇಳಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟವಾಗಿ ಹೇಳಿದ್ದಾರೆ ನಮ್ಮಲ್ಲಿ ಹೈಕಮಾಂಡ ನಿರ್ಧಾರವೇ ಅಂತಿಮ ತೀರ್ಮಾನ, ಹೈಕಮಾಂಡ ಏನು ಹೇಳುತ್ತೆ, ಅದೇ ನಡೆಯುತ್ತೆ,ಗ್ಯಾರಂಟಿ ವಿಚಾರದಲ್ಲಿ ಪ್ರತಿಪಕ್ಷದ ಟೀಕೆಗೆ ಉತ್ತರಿಸಿದ ಅವರು, ಮಾಜಿ ಪ್ರಧಾನಿ ದೇವೆಗೌಡ್ರು ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನೀಸಬೇಕು, ಬಿಜೆಪಿ ದೇಶದ ಬೇರೆ ಬೇರೆ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಯಾಕೆ ನಕಲು ಮಾಡುತ್ತಿದಿರಿ, ಮತ್ತು ಕೇಂದ್ರದಿಂದ ಬರಬೇಕಾದ ಅನುದಾನದಲ್ಲಿ ತಾರತಮ್ಯ ಬಗ್ಗೆ ಪ್ರಧಾನಿ ಅವರಿಗೆ ಕೇಳಲಿ ಎಂದು ಅವರು ವಾಗ್ದಾಳಿ ನಡೆಸಿದರು .