ಮಳೆ ನೀರು ರೈತರ ಹೊಲಗಳಿಗೆ ನುಗ್ಗಿವೆ ಕಂಗಾಲಾದ ಅನ್ನದಾತ
ಕಲಬುರಗಿ: ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕಿನ ಕುರನೂರ ಡ್ಯಾಮನಿಂದ ಗುರುವಾರ ರಾತ್ರಿ ನೀರು ಹರಿಬಿಟ್ಟಿದ್ದರಿಂದ ಅಫಜಲಪುರ ತಾಲೂಕಿನ ಜೇವರಗಿ ತೆಲ್ಲೂಣಗಿ ಹಿರೆ ಜೇವರಗಿ ನಂದರಗಿ ಗೌರ ಬಂಕಲಗಿ ದಿಕ್ಸಂಗಾ ಈ ಎಲ್ಲಾ ಗ್ರಾಮಗಳ ರೈತರ ಜಮೀನಿಗೆ ನೀರು ನುಗ್ಗಿದ್ದು ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸುಮಾರು ನೂರಾರು ಎಕರೆ ಮೇಲಪಟ್ಟು ಬೆಳೆದ ಬೆಳೆ ಹಾನಿಯಾಗಿದೆ. ಸಾಲ ಸೋಲ ಮಾಡಿ ಬಿತ್ತಿದ ರೈತರ ಹೊಲ ಗದ್ದೆಯಲ್ಲಿದ್ದ ರೈತರ ವಾಣಿಜ್ಯ ಬೆಳೆಗಳಾದ ಹತ್ತಿ ತೊಗರಿ ಉದ್ದು ಕಬ್ಬು ಸೋಯಾಬಿನ…


