ಆಂದೋಲಾ ಶ್ರೀ ಉಪವಾಸ ಸತ್ಯಾಗ್ರಹಕ್ಕೆ ದೇವಸ್ಥಾನದ ಟ್ರಸ್ಟ್ ಖಂಡನೆ | ಸುದ್ದಿಗೋಷ್ಟಿಯಲ್ಲಿ ಆಕ್ರೋಶ
ಬಹಿರಂಗ ಚರ್ಚೆಗೆ ಬರಲು ಆಡಳಿತ ಮಂಡಳಿ ಸವಾಲು
ಚಿತ್ತಾಪುರ ; ದಂಡಗುಂಡ ಬಸವಣ್ಣ ದೇವಸ್ಥಾನದ ಕುರಿತು ವಿವಿಧ ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮಿಜಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಮ್ಮಿಕೊಳ್ಳುತ್ತಿರುವ ಉಪವಾಸ ಸತ್ಯಗ್ರಹಕ್ಕೆ ಶ್ರೀ ದಂಡಗುಂಡ ಬಸವಣ್ಣ ದೇವಸ್ಥಾನದ ಟ್ರಸ್ಟ್ ಖಂಡಿಸುತ್ತದೆ ಎಂದು ಟ್ರಸ್ಟ್ ಪ್ರಧಾನ ಕಾಯ೯ದಶಿ೯ ಚಂದ್ರಶೇಖರ ಅವಂಟಿ ಅವರು ಹೇಳಿದ್ದಾರೆ.
ತಾಲೂಕಿನ ದಂಡಗುಂಡ ದೇವಸ್ಥಾನದ ಸಭಾಗಂಣದಲ್ಲಿ ಬುಧವಾರ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅವರು ಸ್ವಯಂ ಘೋಷಿತ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷರಾಗಿದ್ದಾರೆ ಎಂದರು.
ಸ್ವಾಮೀಜಿಯವರು ದಾಖಲೆಗಳು ನೋಡದೇಯೇ ಅರಿವು ಇಲ್ಲದೇ ಏನೇನೂ ಸುಳ್ಳು ಮಾತನಾಡುತ್ತಿದ್ದಾರೆ. ದೇವಸ್ಥಾನದ ಟ್ರಸ್ಟ್ ಅನಧಿಕೃತ ಟ್ರಸ್ಟ್, ನಕಲಿ ಟ್ರಸ್ಟ್ ಎಂದು ಸ್ವಾಮೀಜಿ ಸುಳ್ಳು ಆರೋಪ ಮಾಡಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು, ೧೯೮೪-೧೯೮೫ ರಲ್ಲಿ ಟ್ರಸ್ಟ್ ನೊಂದಣಿಯಾಗಿರುವುದನ್ನು ಅದರ ದಾಖಲೆಗಳನ್ನು ಪ್ರಶ್ನೀಸಿದರು. ಇನ್ನೂ ನಕಲಿ ಟ್ರಸ್ಟ್ ಇದ್ದರೇ ದೇವಸ್ಥಾನದ ಹೊರಗಡೆಯ ಸೌಲಭ್ಯಗಳಿಗೆ ಸಕಾ೯ರ ಅನುದಾನ ಹೇಗೆ ನೀಡುತ್ತದೆ ಎಂಬುದನ್ನು ಅರಿತುಕೊಂಡು ಮಾತನಾಡಬೇಕು. ಅಂದೋಲಾ ಶ್ರೀಗಳಿಗೆ ಅನ್ಯಾಯವಾಗಿದೆ ಎಂದು ಹೇಳುತ್ತಾರೆ, ಏನು ಅನ್ಯಾಯವಾಗಿದೆ ಸ್ಪಷ್ಟನೆ ನೀಡಬೇಕು, ದಾಖಲೆಯಿರುವ ಅಧಿಕೃತವಾದ ಆಡಳಿತ ಮಂಡಳಿಗೆ ನಕಲಿ ಟ್ರಸ್ಟ್ ಎಂದು ಹೇಳುತ್ತಿದ್ದರೇ, ನಾವು ನಿಮಗೆ ನಕಲಿ ಸ್ವಾಮಿ ಎಂದು ಹೇಳಬೇಕಾಗುತ್ತೆ. ಕಾವಿಧಾರಿಗಳಿಗೆ ಕಳಂಕ ತರುವಂತ ಕೆಲಸ ಆಂದೋಲಾ ಶ್ರೀ ಮಾಡುತ್ತಿದ್ದಾರೆ. ಕಾವಿಗೆ ನಾವು ಎಂದು ಧಿಕ್ಕಾರ ಹಾಕಿಲ್ಲ, ಕಾವಿಗೆ ಯಾವಾಗಲೂ ನಾವು ಗೌರವ ನೀಡಿದ್ದೇವೆ ಎಂದು ಹೇಳಿದರು.
ಆಂದೋಲಾ ಶ್ರೀಗಳು ಪ್ರಚಾರ, ಪಬ್ಲಿಕ್ ಸಿಟಿಗೊಸ್ಕರ್ ಇಲ್ಲಸಲ್ಲದ ಮಾತನಾಡುತ್ತಿರುವುದು ನಿಮಗೆ ಶೋಭೆ ತರುವುದಿಲ್ಲ. ದಂಡಗುಂಡ ಗ್ರಾಮದ ಜನರಿಗೆ ಅಜ್ಞಾನಿಗಳು ಎಂದು ಹೇಳಿ ಇಡೀ ಗ್ರಾಮದ ಜನರಿಗೆ ಮತ್ತು ಇಲ್ಲಿನ ಭಕ್ತರಿಗೆ ಅವರು ಅವಮಾನ ಮಾಡಿದ್ದಾರೆ. ಅಂದೋಲಾ ಶ್ರೀಗಳು ನಿಮಗೆ ಯಾವ ಅನ್ಯಾಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಗ್ರಹ ಕುಳಿತುಕೊಳ್ಳುತ್ತಿದಿರಿ ಎಂದು ಪ್ರಶ್ನೀಸಿದರು. ಸಮಸ್ಯೆಗಳು ಬಗೆಹರಿಬೇಕು. ದೇವಸ್ಥಾನ ಅಭಿವೃದ್ಧಿ ಆಗಬೇಕಾದರೇ ಸ್ವಾಮೀಜಿಗಳು ಸಮಾಜದಲ್ಲಿ ಸಾಮರಸ್ಯ ಬೆಳೆಸಬೇಕು. ಈ ರೀತಿಯಾಗಿ ನೀವು ನಡೆದುಕೊಳ್ಳುವುದು ಸರಿಯಿಲ್ಲ, ಜಿಲ್ಲಾಧಿಕಾರಿ ಕಚೇರಿ ಮುಂದೆ ನೀವು ಉಪವಾಸ ಕುಳಿತುಕೊಳ್ಳವುದರಿಂದ ಪಬ್ಲಿಕ್ ಸಿಟಿ ಸಿಗುತ್ತೆ ಅಷ್ಟೆ. ಭಕ್ತರ ಹಿತದೃಷ್ಟಿಯಿಂದ ಸತ್ಯಾಗ್ರಹ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ದಂಡಗುಂಡ ಬಸವಣ್ಣನ ದೇವಸ್ಥಾನದ ಜಾತ್ರೆಗೆ ಯಾರು ಅಂದೋಲ ಶ್ರೀಗಳಿಗೆ ಆಹ್ವಾನ ನೀಡಿಲ್ಲ. ಭಕ್ತರಲ್ಲಿ ಪ್ರಚೋದನೆ ಮಾಡಲು ದಂಡಗುಂಡ ದೇವಸ್ಥಾನಕ್ಕೆ ಆಂದೋಲಾ ಶ್ರೀಗಳು ಬರುತ್ತಿರುವುದನ್ನು ಅಧಿಕಾರಿಗಳು ತಡೆದು ಒಳ್ಳೆಯ ಕೆಲಸ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಸದಸ್ಯ ಮಹಾಂತಗೌಡ ಪಾಟೀಲ, ದೇವಸ್ಥಾನದ ಪ್ರಧಾನ ಆಚ೯ಕ ಗುರುರಾಜ ಪೂಜಾರಿ ಮಾತನಾಡಿದರು.
ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಸದಸ್ಯ ರಾಜಶೇಖರ ಪಾಟೀಲ್, ಪ್ರಮುಖರಾದ ಬಸವರಾಜಗೌಡ ಪಾಟೀಲ್, ಹಣಮಂತ, ಇಸಪ್, ಮಲ್ಲಪ್ಪ ಸೇರಿದಂತೆ ದಂಡಗುಂಡ ಗ್ರಾಮಸ್ಥರು ಇದ್ದರು.
ಮಾನನಷ್ಟ ಮೊಕದ್ದಮೆ ಎಚ್ಚರಿಕೆ
ಬಸವಣ್ಣ ಭಕ್ತರಿಗೆ ಬೇಡಿದ್ದನ್ನು ನೀಡುವ ದೇವಸ್ಥಾನವಿದೆ. ಆದರೆ ಕೆಲವರು ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ದೇವಸ್ಥಾನದ ಟ್ರಸ್ಟ್ ನಕಲಿ ಎಂದು ಹೇಳಲು ಆಂದೋಲಾ ಸ್ವಾಮೀಜಿಯವರಿಗೆ ಯಾರು ಸಟಿ೯ಫಿಕೇಟ್ ನೀಡಿದ್ದಾರೆ. ಕೆಲವರು ನಮ್ಮ ಮತ್ತು ದೇವಸ್ಥಾನದ ಆಡಳಿತ ಮಂಡಳಿ ವಿರುದ್ದ ಧಿಕ್ಕಾರ ಎಂದು ಕೂಗುತ್ತಾರೆ, ಅಂತಹ ನಾವೇನು ತಪ್ಪು ಮಾಡಿದ್ದೇವೆ ಪ್ರತ್ ವಷ೯ ಅಡಿಟ್ ಮಾಡಿಸುತ್ತೇವೆ ಲೆಕ್ಕ ಪತ್ರ ನೀಡುತ್ತೇವೆ. ಯಾರೇ ಒಬ್ಬರು ಜವಾಬ್ದಾರಿ ಸ್ಥಾನದಲ್ಲಿರುವರು ವಿಚಾರ ಮಾಡಿ, ತಿಳಿದುಕೊಂಡು ಆರೋಪ ಮಾಡಬೇಕು. ಕೂಡಲೇ ಕ್ಷಮೆಯಾಚಿಸಿ, ಸತ್ಯಾಗ್ರಹ ಕೈಬೀಡಬೇಕು. ಇಲ್ಲದಿದ್ದರೇ, ಗ್ರಾಮಸ್ಥರ ಮತ್ತು ಆಡಳಿತ ಮಂಡಳಿ ಸಭೆ ನಡೆಸಿ ಮಾನನಷ್ಟ ಮೊಕದ್ದಮೆ ಹಾಕಲಾಗುವುದು ಎಂದು ಅಂದೋಲಾ ಶ್ರೀಗಳಿಗೆ ಎಚ್ಚರಿಕೆ
ಚಂದ್ರಶೇಖರ ಅವಂಟಿ ಟ್ರಸ್ಟ್ ಪ್ರಧಾನ ಕಾಯ೯ದಶಿ೯
ಆಂದೋಲಾ ಶ್ರೀ ರಾಜಕೀಯ ಬಣ್ಣ ನೀಡಿ ವಾತಾವರಣ ಕೆಡಿಸುತ್ತಿದ್ದಾರೆ. ರಸ್ತೆ ಮೇಲೆ ಮಾತನಾಡುವ ಆಂದೋಲಾ ಶ್ರೀ ಬಹಿರಂಗ ರ‍್ಚೆಗೆ ಬರಬೇಕೆಂದು ಸವಾಲು ಹಾಕಿದರು. ಈ ದೇವಸ್ಥಾನದ ಬಗ್ಗೆ ಅರಿವು ಇಲ್ಲದ ಆಂದೋಲಾ ಶ್ರೀಗಳಿಗೆ ಏನು ಗೊತ್ತಿದೆ. ಶಾಂತಿ ನೆಮ್ಮದಿಯ ದಂಡಗುಂಡ ಕ್ಷೇತ್ರದಲ್ಲಿ ಆಂದೋಲಾ ಸ್ವಾಮೀಜಿ ಕಲುಷಿತ ವಾತಾವರಣ ನಿಮಿಸುತ್ತಿದ್ದಾರೆ.ಕೇವಲ ಪ್ರಚೋದನೆ ಮಾಡಿ ಬೆಂಕಿ ಹಚ್ಚುವ ಕೆಲಸ ಮಾತ್ರ ಗೊತ್ತಿದೆ. ಜಿಲ್ಲಾಧಿಕಾರಿ ಕಚೇರಿ ಮಂದೆ ಮಾಡುತ್ತಿರುವ ಉಪವಾಸ ಸತ್ಯಗ್ರಹಕ್ಕೆ ನಾವು ಖಂಡಿಸುತ್ತೇವೆ.
ಭೀಮಣ್ಣ ಸಾಲಿ ಟ್ರಸ್ಟ್ ಸದಸ್ಯ