ಕಲಬುರಗಿ ::ಅಫಜಲಪುರ ತಾಲೂಕಿನ ಮಣ್ಣೂರ ಶೇಷಗಿರಿ ಹೊಸೂರ ಉಪ್ಪಾರವಾಡಿ ಸೇರಿದಂತೆ ಮಹಾರಾಷ್ಟ್ರದ ನಾಗಣಸೂರ ತೋಳನೂರ ಉಡಗಿ ಗ್ರಾಮಗಳಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಭಾರಿ ಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಮಳೆಯ ನೀರು ಮಣ್ಣೂರದಿಂದ ಕರಜಗಿ ಅಫಜಲಪುರಗೆ ಹೋಗುವ ರಸ್ತೆ ಮಾರ್ಗ ಮಧ್ಯದಲ್ಲಿರುವ ಕಿರಹಳ್ಳ ಹೈದ್ರಾ ಹಳ್ಳದ ಮೇಲೆ ಅಪಾರ ಪ್ರಮಾಣದ ನೀರು ಬಂದಿರುವುದರಿಂದ ಮಣ್ಣೂರದಿಂದ
ಕರಜಗಿ ಅಫಜಲಪುರಗೆ ಹೋಗುವ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದ್ದು ರಸ್ತೆ ಸಂಚಾರ ಗುರುವಾರ ಬೆಳಿಗ್ಗೆಯಿಂದ ಬಂದ್ ಆಗಿದ್ದು, ಸಾರ್ವಜನಿಕರು ತಮ್ಮ ದೈಹಿನಂದಿನ ಕೇಲಸಗಳಿಗೆ ಹೊಗಲು ವಿದ್ಯಾರ್ಥಿಗಳಿಗೆ ಶಾಲೆಗೆ ಹೊಗಲು ತೊಂದರೆ ಉಂಟಾಯಿತು.