ಕಲಬುರಗಿ: ರೈತರು ತಾವು ಪೂರೈಸಿದ ಪ್ರತಿ ಟನ್ ಕಬ್ಬಿಗೆ 250 ಗ್ರಾಂ (ಪ್ರತಿ ಕೆ.ಜಿಗೆ ₹20 ದರದಲ್ಲಿ) ಸಕ್ಕರೆಯನ್ನು ಸೇ 10ರಿಂದ 20 ರವರೆಗೆ ಎನ್ ಎಸ್ ಎಲ್ ಶುಗರ್ಸ್ ಲಿ ಭುಸನೂರ ಕಾರ್ಖಾನೆಯಿಂದ ಅಫಜಲಪುರ ಪಟ್ಟಣದ ಜಾಹಗಿರದಾರ ಕಾಪ್ಲೇಕ್ಸದಲ್ಲಿ ವಿತರಿಸಲಾಗುವುದು. ಸೂಕ್ತ ದಾಖಲೆ ತಮ್ಮ ಆಧಾರ ಕಾರ್ಡ ತೋರಿಸಿ, ರೈತರು ಖುದ್ದಾಗಿ ಅಥವಾ ತಮ್ಮ ಪ್ರತಿನಿಧಿ ಮೂಲಕ ಸಕ್ಕರೆ ಪಡೆಯಬಹುದು ಎಂದು ಕಾರ್ಖಾನೆಯ ಉಪಾಧ್ಯಕ್ಷ ಬಾಸ್ಕರ ನಾಯ್ಡು ತಿಳಿಸಿದ್ದಾರೆ.
ರೈತರಿಗೆ ಅನುಕೂಲವಾಗುವಂತೆ ಅಫಜಲ್ಪುರ ಪಟ್ಟಣ ಹಾಗೂ ಚವಡಾಪುರ ಗ್ರಾಮದಲ್ಲಿ ಶಾಖೆ ತರೆಯಲಾಗಿದೆ ರೈತರು ತಮಗೆ ಸಮಿಪವಿರುವ ಶಾಖೆಗೆಲ್ಲ ಬಂದು ತಗೆದುಕೊಳ್ಳಬಹುದು. ರೈತರಿಗೆ ತಮ್ಮ ಮೋಬೈಲನಲ್ಲಿ ಪಾರ್ಮರ ಕನೆಕ್ಟಿವ ಆ್ಯಪ್ ಹಾಕಲಾಗಿದೆ ರೈತರು ಎಷ್ಟು ಟನ ಕಬ್ಬು ಕಳಿಸಿದ್ದಾರೆ ಬೆಳೆಯ ಬಗ್ಗೆ ಅನುಕೂಲವಾಗುತ್ತದೆ ಕಟಾವು ದಿನಾಂಕ ರಾಸಾಯನಿಕ ಮತ್ತು ರೋಗಗಳ ಬಗ್ಗೆ ನಿರ್ವಹಣೆ ಬಗ್ಗೆ ಮಾಹಿತಿ ಇದೆ ಇದರ ಬಗ್ಗೆ ಸದುಪಯೋಗ ಪಡೆದುಕೊಳ್ಳಬಹುದು.ಸಂಸ್ಥೆಯ ಉಪಾಧ್ಯಕ್ಷ ಬಾಸ್ಕರ ನಾಯ್ಡು,ಉಪ ವ್ಯವಸ್ಥಾಪಕ (ಡೆಪ್ಯುಟಿ ಮ್ಯಾನೇಜರ್) ಅಂಬರಿಷ ಕದಮ, ಮಲ್ಲಪ್ಪ ಅಂಬಿ, ಹೆಚ್ ಆರ ಕುಲಕರ್ಣಿ, ಅಫಜಲಪುರ ಸಿಬ್ಬಂದಿಗಳಾದ ಆನಂದ ಚಾಂದಕವಟೆ, ಸಿದ್ದಾರಾಮ ಗುಡ್ಡೆವಾಡಿ,ಶ್ರೀಶೈಲ ಮೇತ್ರೆ,ಶ್ರೀಮಂತ ಬಿರಾದಾರ,ಸಂಗಮೇಶ ಪದಕಿ, ಸಂಗಮೇಶ ಬಿರಾದಾರ ಇದ್ದರು.