ಕಲಬುರಗಿ: ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕಿನ ಕುರನೂರ ಡ್ಯಾಮನಿಂದ ಗುರುವಾರ ರಾತ್ರಿ ನೀರು ಹರಿಬಿಟ್ಟಿದ್ದರಿಂದ ಅಫಜಲಪುರ ತಾಲೂಕಿನ ಜೇವರಗಿ ತೆಲ್ಲೂಣಗಿ ಹಿರೆ ಜೇವರಗಿ ನಂದರಗಿ ಗೌರ ಬಂಕಲಗಿ ದಿಕ್ಸಂಗಾ ಈ ಎಲ್ಲಾ ಗ್ರಾಮಗಳ ರೈತರ ಜಮೀನಿಗೆ ನೀರು ನುಗ್ಗಿದ್ದು
ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸುಮಾರು ನೂರಾರು ಎಕರೆ ಮೇಲಪಟ್ಟು ಬೆಳೆದ ಬೆಳೆ ಹಾನಿಯಾಗಿದೆ. ಸಾಲ ಸೋಲ ಮಾಡಿ ಬಿತ್ತಿದ ರೈತರ ಹೊಲ ಗದ್ದೆಯಲ್ಲಿದ್ದ ರೈತರ ವಾಣಿಜ್ಯ ಬೆಳೆಗಳಾದ ಹತ್ತಿ ತೊಗರಿ ಉದ್ದು ಕಬ್ಬು ಸೋಯಾಬಿನ ಎಲ್ಲಾ ಬೆಳೆಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ ರೈತರ ಮೋಟಾರ ರಸಗೊಬ್ಬರ ಎಲ್ಲವು ಸಂಪೂರ್ಣ ನೀರಿನಲ್ಲಿ ಕೊಚ್ಚಿ ಹೋಗಿವೆ. ಕೂಡಲೇ ಸಕಾ೯ರ ರೈತರ ಸಹಾಯಕ್ಕೆ ಮುಂದೆ ಬರಬೇಕೆಂದು ಸ್ಥಳೀಯ ರೈತರ ಆಗ್ರಹವಾಗಿದೆ.
ಮಳೆ ನೀರು ರೈತರ ಹೊಲಗಳಿಗೆ ನುಗ್ಗಿವೆ ಕಂಗಾಲಾದ ಅನ್ನದಾತ
