ವಾಕ್ ಥಾನ್ ಗೆ ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಚಾಲನೆ

ಕಲಬುರಗಿ :  ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಮಂಗಳವಾರ ಕೆ.ಕೆ.ಅರ್.ಡಿ.ಬಿ ಮತ್ತು ಕಲಬುರಗಿ ಮಹಾನಗರ ಪಾಲಿಕೆ ಜಂಟಿಯಾಗಿ ಆಯೋಜಿಸಿದ ವಾಕ್ ಥಾನ್ ಗೆ ಕೆ.ಕೆ.ಅರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಚಾಲನೆ ನೀಡಿದರು.

ಜಗತ್ ವೃತ್ತದಿಂದ ಅರಂಭಗೊಂಡ ವಾಕ್ ಥಾನ್ ಡಿ.ಸಿ. ಕಚೇರಿ-ಕೆ.ಕೆ.ಆರ್.ಡಿ.ಬಿ ಕಚೇರಿ ಮಾರ್ಗವಾಗಿ ಪಿ.ಡಿ.ಎ. ಕಾಲೇಜಿಗೆ ಬಂದು ಸಂಪನ್ನಗೊಂಡಿತ್ತು. ವಾಕ್ ಥಾನ್ ನಲ್ಲಿ ನೂರಾರು ಸಂಖ್ಯೆಯಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಅಧಿಕಾರಿಗಳು ಭಾಗವಹಿಸಿದ್ದರು.

ವಾಕ್ ಥಾನ್ ಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಡಾ.ಅಜಯ್ ಸಿಂಗ್ ಅವರು, ಇಡೀ ದೇಶ 1947ರ ಆಗಸ್ಟ್ 15 ರಂದು ಸ್ವಾತಂತ್ರ್ಯದ ರುಚಿ ಸವಿದರೆ ಅಂದಿನ‌ ಹೈದ್ರಾಬಾದ ಕರ್ನಾಟಕ ಪ್ರದೇಶದ ಜನ ಸ್ವಾತಂತ್ರ್ಯದ ಹಕ್ಕಿಯಾಗಿ ಉಸಿರಾಡಲು 1948ರ ಸೆ.17ರ ವರೆಗೆ ಕಾಯಬೇಕಾಯಿತು. ಅಂದಿನಿಂದ ಈ ದಿನ ನಮಗೆ ಸ್ವಾತಂತ್ರ್ಯದ ದಿನದಷ್ಟೆ ಮಹತ್ವದಾಗಿದೆ. ಹೀಗಾಗಿ ಕಲ್ಯಾಣ ಕರ್ನಾಟಕದ ಉತ್ಸವವನ್ನು ಎಲ್ಲರು ಸಂಭ್ರಮದಿಂದ ಆಚರಿಸಬೇಕು ಎಂದು ಕರೆ ನೀಡಿದರು.

ಶಾಸಕ ಅಲ್ಲಮಪ್ರಭು ಪಾಟೀಲ, ಕೆ.ಕೆ.ಅರ್.ಡಿ.ಬಿ. ಮಂಡಳಿ ಕಾರ್ಯದರ್ಶಿ ನಲಿನ್ ಅತುಲ್, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಸೇರಿದಂತೆ ಇತರೆ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!