ಚಿತ್ತಾಪುರ: ಪ್ರಪಂಚದಲ್ಲಿಯೇ ಅತೀ ಗೌರವಯುತ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ. ಈ ವೃತ್ತಿಯಲ್ಲಿರುವ ಪ್ರತಿಯೊಬ್ಬರೂ ಗೌರವಕ್ಕೆ ಅಹ೯ರು ಎಂದು ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ನಾಗಮ್ಮ ಕುಂಬಾರ ಹೇಳಿದರು.
ತಾಲ್ಲೂಕಿನ ಕದರಗಿ ಗ್ರಾಮದ ಸಕಾ೯ರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕರ್ಯಕ್ರಮದಲ್ಲಿ ಡಾ ಸವ೯ಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬ ವಿದ್ಯಾಥಿ೯ ಬಾಲ್ಯದಲ್ಲಿ ವಿದ್ಯೆ ಕಲಿಸಿದಂತಹ ಗುರುವಿಗೆ ಮತ್ತು ಮನೆಯಲ್ಲಿ ಮೊದಲ ಮಾತನಾಡಲು ಅಕ್ಷರ ಕಲಿಸಿದಂತಹ ತಂದೆ-ತಾಯಿಗೆ ಹೆಚ್ಚಿನ ಗೌರವ ನೀಡಬೇಕು ಎಂದರು.
ನಂತರ ಸಹ ಶಿಕ್ಷಕ ಸೊಪ್ಪನಣ್ಣಗೌಡ ಪಾಟೀಲ್, ಅತಿಥಿ ಶಿಕ್ಷಕರಾದ ಜಗದೇವ ಕುಂಬಾರ, ತೇಜಸ್ ಎಲ್ಎಲ್ಎಫ ಶಿಕ್ಷಕ ಹಣಮಂತ ಕುಂಬಾರ ಮಾತನಾಡಿ ಶಾಲೆಯಲ್ಲಿ ಶಿಕ್ಷಕರು ವಿದ್ಯಾಥಿ೯ಗಳಿಗೆ ಕೇವಲ ಅಕ್ಷರಗಳನ್ನು ಕಲಿಸುವುದಿಲ್ಲ ಅವರು ಈ ಜಗತ್ತಿನಲ್ಲಿ ಹೇಗೆ ಬದುಕಬೇಕು ಎನ್ನುವ ಅರಿವನ್ನು ಕಲಿಸುವ ಜೊತೆಗೆ ಜೀವನದಲ್ಲಿ ಏನನ್ನಾದರೂ ಸಾಧಿಸಲು ಗುರುವಿನ ಮಾಗ೯ದಶ೯ನ ಅಗತ್ಯವಾಗಿರುತ್ತದೆ ಎಂದು ದಾರಿ ತೋರಿಸುವ ಶಿಕ್ಷಕ ವೃತ್ತಿಗಿಂತ ದೊಡ್ಡ ವೃತ್ತಿ ಬೇರೊಂದಿಲ್ಲ ಎಂದು ಹೇಳಿದರು.
ಕಾಯ೯ಕ್ರಮದಲ್ಲಿ ಭಾಗವಾಗಿ ಶಿಕ್ಷಕರಿಗೆ ಕುಚಿ೯ ಆಟ, ಚಮಚ ನಿಂಬೆ ಹಣ್ಣಿನ ಆಟ, ಕ್ವಿಜ್ ಆಟ, ಬಲೂನಗಳು ಉದುವ ಆಟ ಮತ್ತು ವಿದ್ಯಾಥಿ೯ಗಳ ಧ್ವನಿ ಕಂಡು ಹಿಡಿಯುವ ಆಟ ಹೀಗೆ ವಿವಿಧ ಆಟಗಳು ನಡೆದವು. ಕರ್ಯಕ್ರಮದಲ್ಲಿ ವಿದ್ಯಾಥಿ೯ಗಳಿಗೆ ಶಿಕ್ಷಕ ಕುರಿತು ಮಾತನಾಡಿದರು. ಆಟಗಳಲ್ಲಿ ವಿಜೇತ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು.