ಗುರುಮಠಕಲ್: ಪಟ್ಟಣದ ನಾರಾಯಣಪೂರ ಬಡಾವಣೆಯ ಶ್ರೀಭದ್ರಕಾಳಿ ಸಮೇತ ವೀರಭದ್ರೇಶ್ವರ ಉತ್ಸವವು ಭಕ್ತಿ ಭಾವದಿಂದ ಸಂಪನ್ನ ಗೊಂಡಿತು.
ಪ್ರತಿವರ್ಷ ಶ್ರಾವಣಮಾಸ ನಂತರ ಬರುವ ಎರಡನೇ ಮಂಗಳವಾರದಂದು ನಡೆಯುವ ಈ ಉತ್ಸವದ ನಿಮಿತ್ಯ ಬೆಳಗ್ಗೆ ಶ್ರೀ ಭದ್ರಕಾಳಿ ಮತ್ತು ಶ್ರೀ ವೀರಭದ್ರ ಸ್ವಾಮಿಗೆ ವಿಶೇಷ ಅಭಿಷೇಕ,ವಿವಿಧ ಹೂಗಳಿಂದ ವಿಶೇಷ ಅಲಂಕಾರ ನಡೆಯಿತು. ಶ್ರೀ ವೀರಭದ್ರೇಶ್ವರ ಉತ್ಸವ ಮೂರ್ತಿಯ ಪಲ್ಲಕ್ಕಿಸೇವೆಯು ವೀರಭದ್ರನ ಅವತಾರದ ವಡಬುಗಳ ವಚನಗಳನ್ನು ಸಾರುವ ಮೂಲಕ ಶಸ್ತ್ರಗಳ ಸೇವೆ ಸಲ್ಲಿಸುವ ವೀರಗಾಸೆ ಕುಣಿತ ದ ಮೂಲಕ ಪುರವಂತರಿಂದ ನಡೆಯಿತು. ಖಾಸಾಮಠದ ಶ್ರೀ ಶಾಂತವೀರ ಗುರು ಮುರುಘ ರಟಜೇಂದ್ರ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ನಂತರ ಮಹಾ ದಾಸೋಹದ ಅನ್ನ ಸಂತರ್ಪಣೆ ನಡೆಯಿತು.ಕಾರ್ಯಕ್ರಮಕ್ಕೆ ಪಟ್ಟಣದ ಆರ್ಯ ವೈಶ್ಯ ಭಕ್ತರು ಮತ್ತು ವಿವಿಧ ರಂಗಗಳ ಗಣ್ಯರು ಆಗಮಿಸಿ ದೇವರ ದರ್ಶನ ಪಡೆದರು.