ಜೇವರ್ಗಿ ೨೦ : ತಾಲ್ಲೂಕಾ ಆಡಳಿತ ವತಿಯಿಂದ. ಹಾಗೂ ತಾಲ್ಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮಿನಿ ವಿಧಾನ ಸೌಧದಲ್ಲಿ ಇಂದು ಡಿ. ದೇವರಾಜ ಅರಸು ಅವರ ೧೧೦ ನೇ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ತಹಶೀಲ್ದಾರ ಮಲ್ಲಣ್ಣ ಯಲಗೋಡ ಅವರು ಮಾತನಾಡಿ ಉಳುವವನೇ ಭೂ ಒಡೆಯ ಎಂಬ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದು ದಲಿತರಿಗೆ ಹಿಂದುಳಿದವರ್ಗದವರಿಗೆ ಭೂಹೀನರಿಗೆ ಬಡವರಿಗೆ ಭೂಮಿಯನ್ನು ನೀಡಿ ಭೂ ಕ್ರಾಂತಿಯನ್ನೇ ಮಾಡಿದ ಹೆಮ್ಮೆಯ ನಾಯಕ ಮತ್ತು ಹಿಂದುಳಿದವರ್ಗದ ಕಣ್ಣಾಗಿ ರಾಜ್ಯದ ಮುಖ್ಯಮಂತ್ರಿಯಾಗಿ ಬಡವರ ಶೋಷಣೆಗೆ ಒಳಗಾದವರ ಬಗ್ಗೆ ನಿಲುವು ತೋರಿ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರು ಎಂದರು .
ಈ ಸಂದರ್ಭದಲ್ಲಿ ಗ್ರೇಡ್ ೨ ತಶೀಲ್ಧಾರ್ ಗೋಪಾಲ್ ಕಪೂರ್,ತಾಲ್ಲೂಕ್ ಮಟ್ಟದ ಅಧಿಕಾರಿಗಳಾದ ಸುಮಂಗಲಾ ಹೂಗಾರ ಡಾ: ಶೋಭಾ ಸಜ್ಜನ,ತಿಪ್ಪೇಸ್ವಾಮಿ,ತಾಲ್ಲೂಕ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತೀರ್ಣಾಧಿಕಾರಿಗಳು ಹನುಮೇಗೌಡ,ತಿಪ್ಪಣ್ಣ ಹದನೂರ, ಶಿವಶರಣ ಕುಂಬಾರ, ಅಬ್ದುಲ್ ರಜಾಕ್,ಚನ್ನಬಸಪ್ಪಗೌಡ,ಹಣಮಂತ,ಶರಣಪ್ಪ,ಮಹಾAತೇಶ ಗಡಕರಿ,ಅಜಿತಪ್ಪ ಎಸ್ ಒಡೆಯರ್,ತಿಪ್ಪೆಸ್ವಾಮಿ,ಹುಲಕಂಠರಾಯ , ಬೈಲಪ್ಪ ನೆಲೋಗಿ ಭೀಮಾಶಂಕರ ಬಿಲ್ಲಾಡ್,ಚಂದ್ರಶೇಖರ್ ನೆರಡಗಿ,ಸೇರಿದಂತೆ ವಿದ್ಯಾರ್ಥಿಗಳು ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.