ತಾಳಿಕೋಟೆ: ತಾಲೂಕಿನ ಹಿರೂರ ಗ್ರಾಮದಲ್ಲಿ ಶ್ರೀ ಭೋಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರರಂದು ಮಹಾ ರಥೋತ್ಸವವು ಸಾವಿರಾರು ಭಕ್ತ ಸಮೂಹದ ಮಧ್ಯ ವಿಜೃಂಬಣೆಯಿಂದ ಜರುಗಿತು.
ರಥೋತ್ಸವ ಅಂಗವಾಗಿ ನಸುಕಿನ ಜಾವ ಶ್ರೀ ಭೋಗೇಶ್ವರ ಮಹಾ ಮೂರ್ತಿಗೆ ವೇ.ಜಗನ್ನಾಥ ಜೋಶಿ ಅವರಿಂದ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಕಾರ್ಯಕ್ರಮಗಳು ಜರುಗಿದವಲ್ಲದೇ ಮುಂಜಾನೆ ೮ ಗಂಟೆಗೆ ಗಂಗಸ್ಥಳದೊಂದಿಗೆ ಕುಂಭ ಕಳಸ ವಾಧ್ಯವೈಭವಗಳೊಂದಿಗೆ ಜರುಗಿ ೧೧ ಗಂಟೆಗೆ ಫಲ್ಲಕ್ಕಿ ಉತ್ಸವವು ಮೇರವಣಿಗೆಯು ಪ್ರಾರಂಭಗೊಂಡು ಶ್ರೀ ಭೋಗೇಶ್ವರ ದೇವಸ್ಥಾನದಿಂದ ಡೋಣಿ ಭೋಗೇಶ್ವರದವರೆಗೆ ಜರುಗಿತು.
ಮಧ್ಯಾಹ್ನ ೧೨ ಗಂಟೆಯಿಂದ ಮಹಾ ಪ್ರಸಾದ ಜರುಗಿತು. ಸಾಯಂಕಾಲ ೫ ಗಂಟೆಗೆ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಮಹಾ ರಥೋತ್ಸವವು ಜರುಗಿತು.
ಈ ರಥೋತ್ಸವದ ಸಮಯದಲ್ಲಿ ಭಕ್ತಾಧಿಗಳು, ಉತ್ತತ್ತಿ, ಬಾಳೆಹಣ್ಣು ರಥಕ್ಕೆ ಅರ್ಪಿಸಿ ಭಕ್ತಿಭಾವ ಮೆರೆದರು.