ಯಾದಗಿರಿ : ಗ್ರಾಮಗಳ ಏಳಿಗೆಯೇ ದೇಶದ ಏಳಿಗೆ ಎಂಬ ಗಾಂಧೀಜಿಯವರ ಕಲ್ಪನೆ ಮೈಗೂಡಿಸಿಕೊಂಡು ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ಶಿಕ್ಷಕರನ್ನು ನೇಮಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಸೈದಾಪುರ ಗ್ರಾಮದ ಯುನೈಟೆಡ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಶರಣಬಸವ ಪೊಲೀಸ್ ಬಿರಾದರ್ ಅವರು ಹೇಳಿದರು.
ಜಿಲ್ಲೆಯ ಶಹಾಪುರ ತಾಲೂಕಿನ ಸೈದಾಪುರ ಗ್ರಾಮದ ಯುನೈಟೆಡ್ ಪಬ್ಲಿಕ್ ಶಾಲೆಯಲ್ಲಿ 79 ನೇ ಸ್ವಾತಂತ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಯಾದಗಿರಿ ಜಿಲ್ಲೆಯು ಶಿಕ್ಷಣದಲ್ಲಿ ಹಿಂದುಳಿದ ಕಾರಣ ನಮ್ಮ ಮಕ್ಕಳು ಬೆಂಗಳೂರು, ಮಂಗಳೂರು ಭಾಗದ ಮಕ್ಕಳೊಂದಿಗೆ ಸ್ಪರ್ಧಿಸಲು ಹರಸಾಹಸ ಪಡುವಂತಾಗಿದೆ. ಆದ್ದರಿಂದ ನಾವು ಉತ್ತಮ ಮೂಲ ಸೌಕರ್ಯ ಒದಗಿಸಿ, ಪ್ರತಿಭಾನ್ವಿತ ಶಿಕ್ಷಕರನ್ನು ನೇಮಿಸಿ, ಮಕ್ಕಳ ಮನಸ್ಸಿಗೆ ನಾಟುವಂತೆ ಶಿಕ್ಷಣ ನೀಡಲು ಮುಂದಾಗಿದ್ದೇವೆ. ಪೋಷಕರ ಮತ್ತು ಈ ಭಾಗದ ಜನರ ಸಹಾಯ ಸಹಕಾರ ಅವಶ್ಯಕವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಶಾಲಾ ಆಡಳಿತ ಮಂಡಳಿ ಏರ್ಪಡಿಸಿದ್ದ ಬರವಣಿಗೆ, ಕ್ರೀಡೆ, ಕಲಾ ಕಾರ್ಯಕ್ರಮ ಸೇರಿ ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾದ ಮಕ್ಕಳಿಗೆ ಪದಕ ನೀಡಿ ಸನ್ಮಾನಿಸಿದರು. ಕಾರ್ಯಕ್ರಮವನ್ನು ಶಿಕ್ಷಕರಾದ ಶಿಲ್ಪಾ ಕೇರಳ ನಿರೂಪಿಸಿದರು, ಸಿದ್ದಾರೂಢ ನಡಕೂರ ಸ್ವಾಗತಿಸಿದರು, ಯಶೋಧಾ ವಂದಿಸಿದರು.
ಇದೇ ಸಂದರ್ಭದಲ್ಲಿ ಕು.ಸ್ವಾತಿ ಕಲಬುರಗಿ, ರವಿ ರಾಜಾಪುರ, ದೇವರಡ್ಡಿ ಎನ್ ಲಖನಾಪುರ, ಸಿದ್ದಣ್ಣ ಕಾಡ ಮಗೇರಾ, ನಿಂಗಣ್ಣಗೌಡ ಪೊಲೀಸ್ ಬಿರಾದರ್, ಪತ್ರಕರ್ತ ಚನ್ನಬಸಪ್ಪ ಬಿ. ದೊಡ್ಡಮನಿ, ನಯುಮ್ ಮಲ್ಲಿಕ್, ಶಾಂತಗೌಡ ಪಾಟೀಲ್, ಸಂಗನಬಸಪ್ಪ ಹಾದಿಮನಿ, ಆರಿಫ್, ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಅಪರ್ಣಾ ಕೇರಳ, ಕಾರ್ಯದರ್ಶಿ ಶಿವಲಿಂಗಮ್ಮ ಎಸ್ ಹಾಗೂ ಮಕ್ಕಳು ಪೋಷಕರು ಸೇರಿದಂತೆ ಇತರರು ಇದ್ದರು.