ವಡಗೇರಾ: ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಹಾತ್ಮರ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದೊರಕಿದೆ ಅವರ ಸ್ಮರಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಹಸೀಲ್ದಾರ್ ಶ್ರೀಮತಿ ಮಂಗಳಾ.ಎಂ ಹೇಳಿದರು. ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ 79 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಅವರು ಧ್ವಜಾರೋಹಣ ನೆರವೇರಿಸಿ ನಂತರ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ದೇಶ ಭಾವೈಕ್ಯತೆಯ ಬಿಡಾಗಿದೆ ಪ್ರತಿಯೊಬ್ಬ ಪ್ರಜೆಯೂ ಸಹೋದರತ್ವದಿಂದ ಬಾಳಬೇಕು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಪ್ರತಿಯೊಬ್ಬ ಯುವಕರು ದೇಶಾಭಿಮಾನ ಬಳಸಿಕೊಳ್ಳುವುದರ ಜೊತೆಗೆ ಸಂತ ಶರಣ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಇದೇ ಸಮಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇಓ ಮಲ್ಲಿಕಾರ್ಜುನ್ ಸಂಗ್ವಾರ್, ಪಿಡಿಓ ಶರಣಗೌಡ ಊಳ್ಳೆಸೂಗುರ.ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಪ್ಪ ತಮ್ಮಣೂರ,ಗ್ರೇಡ್ 2.ತಹಸೀಲ್ದಾರ್ ಪ್ರಕಾಶ್ ಹೊಸಮನಿ, ಉಪತಹಸೀಲ್ದಾರ್ ಸಂಗಮೇಶ್ ದೇಸಾಯಿ, ಕಂದಾಯ ನಿರೀಕ್ಷಕ ಬಸವರಾಜ್,ಪಟ್ಟಣದ ಮುಖಂಡರಾದ ಮಕ್ಕಳ ತಜ್ಞ ಡಾ.ಸುಭಾಷ್ ಕರಣಿಗಿ, ಸಿದ್ದಣ್ಣಗೌಡ ಕಾಡಂನೂರ್ , ಬಾಶೂಮಿಯಾ ನಾಯ್ಕೋಡಿ,ಅಶೂಕ ಸಾಹು ಕರಣಗಿ ,ಮಲ್ಲುಗೌಡ ಪೊಲೀಸ್ ಪಾಟೀಲ್, ಬಸವರಾಜ ಸೊನ್ನದ, ಅಶೋಕ್ ಮುಸ್ತಾಜೀರ್, ಡಾ.ಮರೇಪ್ಪ ನಾಟೇಕಾರ, ಹಣಮಂತರಾಯ ಜಡಿ , ಪ್ರಮೋದ್ ಸ್ವಾಮಿ, ಬಸವರಾಜ್ ನೀಲಹಳ್ಳಿ, ಶಿವರಾಜ್ ಬಾಗುರ್,ಮರೇಪ್ಪ ಜಡಿ,ಯಂಕಣ್ಣ ಬಸವಂತಪುರ, ಶರಣು ಇಟಗಿ, ರುಕ್ಮುದ್ದಿನ್, ಸಿದ್ದಲಿಂಗಪ್ಪ ಪಿಡ್ಡೆ ಗೌಡ, ಭೀಮಣ್ಣ ಚಿನ್ನಿ,ಅಬ್ದುಲ್ ಚಿಗನೂರ, ಮಲ್ಲಣ್ಣ ನೀಲಳ್ಳಿ, ಶಿವು ಗೋನಾಲ, ಮಹಮ್ಮದ್ ಖುರೇಷಿ, ಗುರು ನಾಟೇಕಾರ,ದೇವು ಜಡಿ, ಸತೀಶ್,ಶರಣು,ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಅಯ್ಯಪ್ಪ ಬಡಿಗೇರ, ತಹಸೀಲ್ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳು ಗ್ರಾಮ ಪಂಚಾಯತ್ ಸದಸ್ಯರು ವಿವಿಧ ಸಂಘಟನೆಯ ಮುಖಂಡರು,ಪಟ್ಟಣದ ಸಾರ್ವಜನಿಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು