ಕಲಬುರಗಿ ಜಿಲ್ಲೆಯಲ್ಲಿ ಸೆಪ್ಟೆಂಬರ ತಿಂಗಳಲ್ಲಿ ಶೇ. 63 ರಷ್ಟು ಹೆಚ್ಚು ಮಳೆ ತುರ್ತು ಪರಿಹಾರ, ಮುಂಜಾಗರೂಕತ ಕ್ರಮ ತೆಗೆದುಕೊಳ್ಳಲು ಸಚಿವರು ಸೂಚನೆ ನೀಡಿದ್ದಾರೆ. ಅತಿವೃಷ್ಟಿ ಹಾಗೂ ಪ್ರವಾಹದಂತಹ ಆಕಸ್ಮಿಕಗಳು ಸಂಭವಿಸಿದ ಸಂದರ್ಭಗಳಲ್ಲಿ ಅಧಿಕಾರಿಗಳು ವಿವೇಚನೆಯಿಂದ ವರ್ತಿಸಿ, ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ತುರ್ತು ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಹಾಗೂ ತಾತ್ಕಾಲಿಕ ವಸತಿ, ಆಹಾರ ಸರಬರಾಜು ಸೌಲಭ್ಯಗಳನ್ನು ಕೂಡಲೇ ಒದಗಿಸಲು ನಿರ್ಧರಿಸಬೇಕು ಎಂದು ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ 2025ರ ಆಗಸ್ಟ್ ತಿಂಗಳಲ್ಲಿ ಶೇ. 69 ರಷ್ಟು ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಶೇ.63 ರಷ್ಟು ವಾಡಿಕೆಗಿಂತಲೂ ಹೆಚ್ಚಿನ ಮಳೆಯಾಗಿದ್ದು, ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಸುರಿದ ಅಧಿಕ ಮಳೆಯಿಂದ ಆಗಿರುವ ಪರಿಣಾಮಗಳು ಹಾಗೂ ಅವುಗಳನ್ನು ಸಮರ್ಪಕವಾಗಿ ಎದುರಿಸುವ ಸಂಬಂಧ ಕಲುಬುರಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಹಲವು ಸೂಚನೆಗಳು ನೀಡಿರುತ್ತಾರೆ.
ನದಿಗಳಿಂದ ಅಧಿಕ ನೀರು ಹೊರಕ್ಕೆ
ಮಹಾರಾಷ್ಟ್ರ ರಾಜ್ಯದ ಉಜ್ಜನಿ ಮತ್ತು ಸಿನಾ ಜಲಾಶಯದಿಂದ ಭೀಮಾ ನದಿಗೆ 2.95 ಲಕ್ಷ ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಈ ನೀರು ಅಫಜಲಪೂರ ತಾಲ್ಲೂಕಿನ ಭೀಮಾ ಸೊನ್ನ ಬ್ಯಾರೇಜಿಗೆ ಇಂದು ಬಂದು ತಲುಪುತ್ತದೆ. ಈಗಾಗಲೇ ಸೊನ್ನ ಬ್ಯಾರೇಜ್ನಿಂದ 3.50 ಲಕ್ಷ ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ, ಸದ್ಯ ಉಜ್ಜನಿ ಮತ್ತು ಸಿನಾ ಜಲಾಶಯದಿಂದ ಬೀಮಾ ನದಿಗೆ ಹೊರ ಹರಿವಿನ ಪ್ರಮಾಣ ಕಡಿಮೆ ಯಾಗುತ್ತಿದು, ಮುಂದಿನ ದಿನಗಳಿಲ್ಲಿ ಬೀಮಾ ನದಿಯ ಪ್ರವಾಹ ಇಳಿಮುಖವಾಗುವುದು. ಅಗತ್ಯ ಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದ್ದಾರೆ.
> ಈಗಾಗಲೇ ಭೀಮಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿವು ಬಿಡುತ್ತಿರುವ ಪ್ರಯುಕ್ತ ನಗರ ಮತ್ತು ಗ್ರಾಮೀಣ ಪ್ರದೇಶದ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರನ್ನು ಗುರುತಿಸಿ ಸುರಕ್ಷಿತ ಸ್ಥಳಗಳಿಗೆ/ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸುವದು,
> ನದಿ,ಹಳ್ಳ, ಕೆರೆ ದಡದಲ್ಲಿರುವ ಗುಡಿ,ಮಸೀದಿ,ಚರ್ಚ್ ಮುಂತಾದ ಧಾರ್ಮಿಕ ಕೇಂದ್ರಗಳಲ್ಲಿ ಪೊಜೆ, ಪ್ರಾರ್ಥನೆ ಹಾಗೂ ಭಾಗಿನ ಸಲ್ಲಿಸುವವರನ್ನು ಮನವೊಲಿಸಿ ನದಿ, ಹಳ್ಳ, ಕೆರೆ ದಡದಲ್ಲಿ ತೆರಳದಂತೆ ಮುನ್ನಚ್ಚರಿಕೆ ತೆಗೆದುಕೊಳ್ಳುವುದು.
> ಜಿಲ್ಲಾ, ತಾಲೂಕು, ಹೋಬಳಿ ಹಾಗೂ ಗ್ರಾಮ ಪಂಚಾಯತ್ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲಿದ್ದು ಸದ್ಯ ಪ್ರವಾಹ ಪರಿಸ್ತಿತಿ ಇರುವುದರಿಂದ ಯಾವುದೇ ಅಹಿತಕರ ಘಟನೆಯಾಗದಂತೆ ಮುನ್ನಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಿದೆ.
> ಜಲಾಶಯದಿಂದ ನೀರು ಬಿಡುವ ಬಗ್ಗೆ ಮಾಹಿತಿ ಬಂದ ಕೂಡಲೇ ನದಿ ಪಾತ್ರದಲ್ಲಿರುವ ಗ್ರಾಮಗಳ ಸಾರ್ವಜನಿಕರಿಗೆ ಮುಂಚಿತವಾಗಿ ತಿಳುವಳಿಕೆ ನೀಡಲು ಡಂಗುರದ ಮೂಲಕ ಪ್ರಚಾರ ಮಾಡಲು ಮತ್ತು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳುವುದು.
ತುರ್ತು ಕೈಕೊಳ್ಳಬೇಕಾದ ಕ್ರಮಗಳು
> ಮಳೆಯಿಂದ ಮೃತರಾದವರ ಕುಟುಂಬಗಳ ಅವಲಂಬಿತರಿಗೆ ತಕ್ಷಣ ಪರಿಹಾರ ಒದಗಿಸಲು ಕ್ರಮ ಆಗಬೇಕು, ಆಸ್ಪತ್ರೆಗಳಲ್ಲಿ ಅವಶ್ಯ ಔಷಧಿಗಳು, ಒ.ಆರ್.ಎಸ್. ಫಸ್ಟ್ ಎಯ್ಡ್ ಸಾಮಗ್ರಿಗಳನ್ನು ದಾಸ್ತಾನು ಇರಿಸಿಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
> ಪ್ರವಾಹದಿಂದ ಮನೆ ಹಾನಿಯಾದ ಹಾಗೂ ಮನೆ ಕಳೆದುಕೊಂಡ ಸಂತ್ರಸ್ತರಿಗರೆ ಕೂಡಲೆ ಜಂಟಿ ಸಮೀಕ್ಷೆ ಮಾಡಿ ಸರಕಾರದ ಮಾರ್ಗ ಸೂಚಿಯನ್ವಯ ಪರಿಹಾರ ವಿತರಿಸಲು ಸೂಕ್ತ ಕ್ರಮ ಕೈಕೊಳ್ಳಲು ಸೂಚಿಸಲಾಯಿತು
> ಮಹತ್ವ ದಾಖಲೆಗಳು:– ಪ್ರವಾಹದಿಂದ ಸಾರ್ವಜನಿಕರು ಮಹತ್ವ ದಾಖಲೆಗಳಾದ ಪಡಿತರ ಚೀಟಿ, ಪಹಾಣಿ ಪತ್ರಿಕೆ ಇತ್ಯಾದಿ ದಾಖಲೆಗಳನ್ನು ಕಳೆದುಕೊಂಡಲ್ಲಿ ಎಲ್ಲಾ ಕೂಡಲೇ ದಾಖಲೆಗಳನ್ನು ಸಂಬಂಧಪಟ್ಟವರಿಗೆ ಒದಗಿಸಲು ಕ್ರಮ ಕೈಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.
> ಕುಡಿಯುವ ನೀರು :- ಪ್ರವಾಹದಿಂದ ನಗರ/ಗ್ರಾಮೀಣ ಮಟ್ಟದಲ್ಲಿ
ಕುಡಿಯುವ ನೀರಿನ ಪೈಪಲೈನ್ ಗಳು, ಬಾವಿಗಳೂ ಹಾಗೂ ಇತರೆ ಕುಡಿಯುವ ನೀರು ಸಂಗ್ರಹಣಗಳು ಹಾನಿಯಾದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ದುರಸ್ತಿ ಮಾಡಿಸಿ ಹಾಗೂ ಸುಚಿಗೊಳಿಸಿ, ಶುದ್ಧವಾದ ಕುಡಿಯುವ ನೀರು ವದಗಿಸಲು ಸೂಚಿಸಲಾಯಿತು.
> ಆರೋಗ್ಯ ಇಲಾಖೆ:- ಈಗಾಗಲೇ ಕೆಲವು ಗ್ರಾಮಗಳಲ್ಲಿ ಪ್ರವಾಹ ಇಳಿಮುಖವಾಗಿದ್ದು ತಕ್ಷಣವೆ ಆರೋಗ್ಯ ಇಲಾಖೆಯಿಂದ ಪ್ರವಾಹದ ನಂತರ ಉಂಟಾಗುವ ಸಾಂಕ್ರಾಮಿಕ ರೋಗಗಳ ಕುರಿತು ಜನರಲ್ಲಿ ಅರಿವು ಮುಡಿಸುವುದು ಹಾಗೂ ಸಾರ್ವಜನಿಕರ ವೈದ್ಯಕೀಯ ಆರಕ್ಕೆ ಕುರಿತು ಕ್ರಮ ವಹಿಸುವುದು
> ಜಂಟಿ ಸಮೀಕ್ಷೆ:- ಸೆಪ್ಟೆಂಬರ ಮಾಹೆಯಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದ ಹಾನಿಯಾದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಜಂಟಿ ಸಮೀಕ್ಷೆಯನ್ನು ಮುಗಿಸಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು
ಮೂಲಭೂತ ಸೌಕರ್ಯಗಳು ಪ್ರವಾಹದಿಂದ ಹಾಗೂ ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಹಾನಿಯಾದ ಹಾನಿಯಾದ ಮೂಲಭೂತ ಸೌಕರ್ಯಗಳಾದ ರಸ್ತೆ, ಸೇತುವೆ, ಶಾಲೆ, ಅಂಗನವಾಡಿ ಕೇಂದ್ರಗಳು, ಪ್ರಾಥಮೀಕ ಆರೋಗ್ಯ ಕೇಂದ್ರಗಳು, ಕೇರೆಗಳು, ಹಾಗೂ ವಿದ್ಯುತ್ ಕಂಬಗಳು, ಟ್ರಾನ್ಸಫರ್ಮಗಳು, ವಿದ್ಯತ ಲೈನ್ ಗಳ ಕುರಿತು ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ಕೂಡಲೆ ಸಮಿಕ್ಷೆ ಕಾರ್ಯ ಕೈಕೊಂಡು ಸರಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಯಿತು.
ತಾಲ್ಲೂಕುವಾರು ಗುರುತಿಸಲಾದ ಪ್ರವಾಹ ಪೀಡಿತ ಗ್ರಾಮಗಳು ಹಾಗೂ ತೆರೆಯಲಾದ ಕಾಳಜಿ ಕೇಂದ್ರಗಳು
ಈಗಾಲೇ ಕಲಬುರಗಿ ಜಿಲ್ಲೆಯ ಭಾರಿ ಮಳೆಯಿಂದಾಗಿ ಒಟ್ಟು 88 ಗ್ರಾಮ ಗಳನ್ನು ಪ್ರವಾಹ ಪೀಡಿತ ಗ್ರಾಮಗಳೆಂದು ಗುರುತಿಸಲಾಗಿದ್ದು, ಒಟ್ಟು 56 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು ಸದ್ಯ ಒಟ್ಟು 38 ಕಾಳಜಿ ಕೇಂದ್ರಗಳನ್ನು ಮುಚ್ಚಲಾಗಿದೆ ಹಾಗೂ ಒಟ್ಟು 18 ಕಾಳಜಿ ಕೇಂದ್ರಗಳು ಚಾಲ್ತಿಯಲ್ಲಿರುತ್ತವೆ ಹಾಗೂ ಸದರಿ ಚಾಲ್ತಿಯಲ್ಲಿರುವ ಕಾಳಜಿ ಕೇಂದ್ರಗಳಿಗೆ ಒಟ್ಟು 3861 ಸಾರ್ವಜನಿಕರಿಗೆ ಇರಿಸಲಾಗಿದೆ.
1) ಅಫಜಲಪುರ:
ಪ್ರವಾಹ ಪೀಡಿತ ಗ್ರಾಮಗಳು -17, ಗುರುತಿಸಲಾದ ಕಾಳಜಿ ಕೇಂದ್ರಗಳು – 17, ತೆರೆಯಲಾದ ಕಾಳಜಿ ಕೇಂದ್ರಗಳು – 3, ಮುಚ್ಚಲಾದ ಕೇಂದ್ರಗಳು – 0, ಪ್ರಸ್ತುತ ಚಾಲನೆಯಲ್ಲಿರುವ ಕಾಳಜಿ ಕೇಂದ್ರಗಳು – 3.
2) ಜೇವರ್ಗಿ
ಪ್ರವಾಹ ಪೀಡಿತ ಗ್ರಾಮಗಳು -30, ಗುರುತಿಸಲಾದ ಕಾಳಜಿ ಕೇಂದ್ರಗಳು – 30, ತೆರೆಯಲಾದ ಕಾಳಜಿ ಕೇಂದ್ರಗಳು – 24 , ಮುಚ್ಚಲಾದ ಕೇಂದ್ರಗಳು – 16 ಪ್ರಸ್ತುತ ಚಾಲನೆಯಲ್ಲಿರುವ ಕಾಳಜಿ ಕೇಂದ್ರಗಳು – 8.
3) ಕಲಬುರಗಿ.
ಪ್ರವಾಹ ಪೀಡಿತ ಗ್ರಾಮಗಳು -7, ಗುರುತಿಸಲಾದ ಕಾಳಜಿ ಕೇಂದ್ರಗಳು – 7, ತೆರೆಯಲಾದ ಕಾಳಜಿ ಕೇಂದ್ರಗಳು – 7, ಮುಚ್ಚಲಾದ ಕೇಂದ್ರಗಳು – 3 ಪ್ರಸ್ತುತ ಚಾಲನೆಯಲ್ಲಿರುವ ಕಾಳಜಿ ಕೇಂದ್ರಗಳು – 4.
4) ಚಿತ್ತಾಪುರ.
ಪ್ರವಾಹ ಪೀಡಿತ ಗ್ರಾಮಗಳು -12, ಗುರುತಿಸಲಾದ ಕಾಳಜಿ ಕೇಂದ್ರಗಳು – 12 ತೆರೆಯಲಾದ ಕಾಳಜಿ ಕೇಂದ್ರಗಳು – 8, ಮುಚ್ಚಲಾದ ಕೇಂದ್ರಗಳು – 7 ಪ್ರಸ್ತುತ ಚಾಲನೆಯಲ್ಲಿರುವ ಕಾಳಜಿ ಕೇಂದ್ರಗಳು – 1.
5) ಚಿಂಚೋಳಿ.
ಪ್ರವಾಹ ಪೀಡಿತ ಗ್ರಾಮಗಳು -3 ಗುರುತಿಸಲಾದ ಕಾಳಜಿ ಕೇಂದ್ರಗಳು – 3, ತೆರೆಯಲಾದ ಕಾಳಜಿ ಕೇಂದ್ರಗಳು – 2, ಮುಚ್ಚಲಾದ ಕೇಂದ್ರಗಳು – 2 ಪ್ರಸ್ತುತ ಚಾಲನೆಯಲ್ಲಿರುವ ಕಾಳಜಿ ಕೇಂದ್ರಗಳು – 1
6. ಸೇಡಂ.
ಪ್ರವಾಹ ಪೀಡಿತ ಗ್ರಾಮಗಳು -5, ಗುರುತಿಸಲಾದ ಕಾಳಜಿ ಕೇಂದ್ರಗಳು – 5, ತೆರೆಯಲಾದ ಕಾಳಜಿ ಕೇಂದ್ರಗಳು – 5, ಮುಚ್ಚಲಾದ ಕೇಂದ್ರಗಳು – 3 ಪ್ರಸ್ತುತ ಚಾಲನೆಯಲ್ಲಿರುವ ಕಾಳಜಿ ಕೇಂದ್ರಗಳು – 2.
7) ಕಾಳಜಿ.
ಪ್ರವಾಹ ಪೀಡಿತ ಗ್ರಾಮಗಳು -8, ಗುರುತಿಸಲಾದ ಕಾಳಜಿ ಕೇಂದ್ರಗಳು – 8, ತೆರೆಯಲಾದ ಕಾಳಜಿ ಕೇಂದ್ರಗಳು – 5, ಮುಚ್ಚಲಾದ ಕೇಂದ್ರಗಳು – 5 ಪ್ರಸ್ತುತ ಚಾಲನೆಯಲ್ಲಿರುವ ಕಾಳಜಿ ಕೇಂದ್ರಗಳು – 0.
8) ಶಹಾಬಾದ್.
ಪ್ರವಾಹ ಪೀಡಿತ ಗ್ರಾಮಗಳು -3, ಗುರುತಿಸಲಾದ ಕಾಳಜಿ ಕೇಂದ್ರಗಳು – 3 ತೆರೆಯಲಾದ ಕಾಳಜಿ ಕೇಂದ್ರಗಳು – 1, ಮುಚ್ಚಲಾದ ಕೇಂದ್ರಗಳು – 1 ಪ್ರಸ್ತುತ ಚಾಲನೆಯಲ್ಲಿರುವ ಕಾಳಜಿ ಕೇಂದ್ರಗಳು – 0.
9) ಆಳಂದ್.
ಪ್ರವಾಹ ಪೀಡಿತ ಗ್ರಾಮಗಳು -3, ಗುರುತಿಸಲಾದ ಕಾಳಜಿ ಕೇಂದ್ರಗಳು – 3, ತೆರೆಯಲಾದ ಕೇಂದ್ರಗಳು – 1, ಮುಚ್ಚಲಾದ ಕೇಂದ್ರಗಳು – 1 ಪ್ರಸ್ತುತ ಚಾಲನೆಯಲ್ಲಿರುವ ಕಾಳಜಿ ಕೇಂದ್ರಗಳು – 0.
ಒಟ್ಟು ಪ್ರವಾಹ ಪೀಡಿತ ಗ್ರಾಮಗಳು – 88, ಗುರುತಿಸಲಾದ ಕಾಳಜಿ ಕೇಂದ್ರಗಳು – 88, ತೆರೆಯಲಾದ ಕೇಂದ್ರಗಳು – 56, ಮುಚ್ಚಲಾದ ಕೇಂದ್ರಗಳು -38, ಪ್ರಸ್ತುತ ಚಾಲನೆಯಲ್ಲಿರುವ ಕಾಳಜಿ ಕೇಂದ್ರಗಳು – 18.
ಬಟ್ಟೆ ದಿನಬಳಕೆ ಸಾಮಗ್ರಿಗಳ ಹಾನಿ – 2832, ಮನೆ ಗೋಡೆ ಬಿದ್ದು ಸಾವು – 1,ನೀರಲ್ಲಿ ಕೊಚ್ಚಿಕೊಂಡು ಹೋಗಿ ಸಾವು – 4, ಒಟ್ಟು 5 ಸಾವು.
ಪೂರ್ಣ ಮನೆ ಹಾನಿ -2, ಭಾಗಶಃ ಮನೆ ಹಾನಿ – 739, ಒಟ್ಟು – 741.
ಪ್ರಾಣಿಗಳ ಜೀವಹಾನಿ :
ದೊಡ್ಡ ಪ್ರಾಣಿಗಳು – 17, ಸಣ್ಣ ಪ್ರಾಣಿಗಳು – 11 ಒಟ್ಡು 28.