ಬೀದರ್ : ಕೇವಲ ಮೀಟಿಂಗ್ ಮಾಡುವುದರಲ್ಲಿ ಕಾಲ ಕಳೆಯುವ ಬದಲು ರಾಜ್ಯದ ರೈತರ ಬಳಿ ಬಂದು ರಾಜ್ಯದಲ್ಲಿ ಆದ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ ರೈತರನ್ನು ಧೈರ್ಯ ತಂಬಿ ಪರಿಹಾರ ನೀಡುವ ಮೂಲಕ ರಾಜ್ಯದ ರೈತರ ಹಿತಕಾಪಾಡುವಂತೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆಗ್ರಹಿಸಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಮತ್ತು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ರಾಜ್ಯದಲ್ಲಿ ಸುರಿದ ಭಾರಿ ಮಳೆ ಮತ್ತು ಮಹಾರಾಷ್ಟ್ರ ರಾಜ್ಯದ ಜಲಾಶಯ ಗಳಿಂದ ಬಿಟ್ಟಿರುವ ನೀರಿನಿಂದ ಗಡಿ ಜಿಲ್ಲೆಗಳಾದ ಬೀದರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಉಂಟಾದ ಪ್ರವಾಹಗಳಿಂದ ಆದ ಹಾನಿಯ ಬಗ್ಗೆ ಮಾಹಿತಿ ಸಂಗ್ರಹಿಸಲು ಬೀದರ ಜಿಲ್ಲೆಯಗೆ ಆಗಮಿಸಿ, ಬಿಜೆಪಿ ನಾಯಕರು ಜಿಲ್ಲೆಯ ವಿವಿಧ ತಾಲ್ಲೂಕು ಗಳಾದ ಬೀದರ ಕಮಲನಗರ ಭಾಲ್ಕಿ ಔರಾದ ಗ್ರಾಮಗಳಿಗೆ ತೆರಳಿ ಮಳೆ ಮತ್ತು ಪ್ರವಾಹ ಗಳಿಂದ ಹಾನಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ ನಂತರ ಮಾತನಾಡಿದರು. ಜಿಲ್ಲೆಯಲ್ಲಿ ಉಂಟಾದ ಮಳೆ ಮತ್ತು ಪ್ರವಾಹಗಳಿಂದ ಜಿಲ್ಲೆಯ ರೈತರು ಶೇಕಡಾ 80 ಗಿಂತಲು ಅಧಿಕ ಪ್ರಮಾಣದಲ್ಲಿ ತಮ್ಮ ಬೆಳೆಗಳನ್ನು ಕಳೆದು ಕೊಂಡಿದಾರೆ ಅಲ್ಲದೆ ಪ್ರವಾಹದಿಂದ ಕೇಲವು ಗ್ರಾಮಗಳಲ್ಲಿ ಮನೆಗಳು ಸಹ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿದರೆ ಈ ಭಾಗದ ಆಡಳಿತ ಪಕ್ಷದ ಸಚಿವರು ಶಾಸಕರು ಬೆಂಗಳೂರಿನಲ್ಲಿ ಕಾಲ ಕಳೆಯುತಿದ್ದಾರೆ ಅವರಿಗೆ ಜನರ ಬಗ್ಗೆ ಯಾವುದೆ ಕಾಳಜಿ ಇಲ್ಲ ಎಂದು ಕಿಡಿಕಾರಿದ ನಾಯಕರು ಕೆವಲ ಮೀಟಿಂಗ್ ಮಾಡುವುದರಲ್ಲಿ ಕಾಲ ಕಳೆಯುವ ಬದಲು ರಾಜ್ಯದ ರೈತರ ಬಳಿ ಬಂದು ರಾಜ್ಯದಲ್ಲಿ ಆದ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ ರೈತರನ್ನು ಧೈರ್ಯ ತಂಬಿ ಪರಿಹಾರ ನೀಡುವ ಮೂಲಕ ರಾಜ್ಯದ ರೈತರನ್ನು ಕಾಪಾಡುವಂತೆ ಒತ್ತಾಯಿಸಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ಅವರ ಸರ್ಕಾರದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದಾಗ ಅವರು ಕೂಡಲೆ ಸ್ಪಂದಿಸಿ ಸರ್ಕಾರದಿಂದ ಪರಿಹಾರ ಬಿಡುಗಡೆ ಮಾಡಿದರು. ಸರ್ಕಾರ ಕೂಡಲೆ ರೈತರ ಸಮಸ್ಯೆ ಸ್ಪಂದಿಸಿ ರೈತರಿಗೆ ಪರಿಹಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು
ಶಾಸಕ ಪ್ರಭು ಚವ್ಹಾಣ ,ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಪಕ್ಷದ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ ಹಾಗೂ ಬಿಜೆಪಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು