ಕಲಬುರಗಿ : ಎಲ್ಲರಿಗೂ ವಿನಮ್ರವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ. ಈ ವರ್ಷ ನಾನು ಜನ್ಮದಿನ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ. ಎಂದು ತಮ್ಮ ಫೇಸ್ ಖಾತೆಯಲ್ಲಿ ಮಾಜಿ ಜಿಪಂ ಅಧ್ಯಕ್ಷ ನಿತೀನ್ ಗುತ್ತೇದಾರ ಅವರು ಮಾಹಿತಿ ನೀಡಿದರು.
ಮತಕ್ಷೇತ್ರದ ಹಾಗೂ ವಿವಿಧ ಕಡೆಗಳಲ್ಲಿ ಇರುವ ನನ್ನ ಪ್ರೀತಿಯ ಬಂಧುಗಳೆ, ಅಭಿಮಾನಿಗಳೇ, ಪಕ್ಷದ ಕಾರ್ಯಕರ್ತರೇ ನಿಮ್ಮೆಲ್ಲರ ಪ್ರೀತಿಯೇ ನನಗೆ ದೊಡ್ಡ ಆಶಿರ್ವಾದ ಮತ್ತು ಉಡುಗೊರೆ ಆಗಿದೆ. ನಿಮ್ಮ ಅಭಿಮಾನಕ್ಕೆ ನನ್ನ ಜೀವಮಾನವಿಡಿ ಋಣಿಯಾಗಿರುತ್ತೇನೆ. ಪ್ರತಿ ವರ್ಷವೂ ಸೆಪ್ಟೆಂಬರ್ 29 ರಂದು ನನ್ನ ಜನ್ಮದಿನದ ಪ್ರಯುಕ್ತ ಪ್ರೀತಿಯಿಂದ ಶುಭ ಹಾರೈಸುತ್ತೀರಿ, ಆರೋಗ್ಯ ಶಿಬಿರ, ರಕ್ತದಾನ, ಅನ್ನ ಸಂತರ್ಪಣೆ ಸೇರಿದಂತೆ ಅನೇಕ ರೀತಿಯಲ್ಲಿ ಪ್ರೀತಿ, ಅಭಿಮಾನ ತೋರಿಸಿ ನನ್ನನ್ನು ಸದಾಕಾಲ ಹರಸಿ ಹಾರೈಸುತ್ತೀರಿ.ನಿಮ್ಮ ಈ ಪ್ರೀತಿಗೆ ನಾನು ಸದಾ ಅಭಿಮಾನಿ ಆಗಿದ್ದೇನೆ.ಈ ಪ್ರೀತಿ ಸದಾ ಕಾಲ ಉಳಿಸಿಕೊಳ್ಳುವ ರೀತಿಯಲ್ಲಿ ನಾನು ನಡೆದುಕೊಳ್ಳುತ್ತೇನೆ. ಎಂದು ಹೇಳಿದರು.
ಈ ವರ್ಷದ ಜನ್ಮದಿನವನ್ನು ಕೂಡ ಬಹಳ ಸಂಭ್ರಮ, ಸಡಗರದಿಂದ ಆಚರಿಸಬೇಕೆಂದು ನೀವೆಲ್ಲರೂ ಬಹಳ ಕಾತುರದಿಂದ ಕಾಯುತ್ತಿದ್ದೀರಿ ಎಂದು ತಿಳಿದುಕೊಂಡಿದ್ದೇನೆ. ಆದರೆ ಎಲ್ಲರಿಗೂ ವಿನಮ್ರವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ. ಈ ವರ್ಷ ನಾನು ಜನ್ಮದಿನ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ. ಎಂದು ತಮ್ಮ ಫೇಸ್ ಖಾತೆಯಲ್ಲಿ ಮಾಜಿ ಜಿಪಂ ಅಧ್ಯಕ್ಷ ನಿತೀನ್ ಗುತ್ತೇದಾರ ಅವರು ಮಾಹಿತಿ ನೀಡಿದರು.
ಕಾರಣ ಇಡೀ ಮತಕ್ಷೇತ್ರದಲ್ಲಿ ವ್ಯಾಪಕ ಮಳೆ, ಭೀಮಾ, ಅಮರ್ಜಾ ನದಿ, ಭೋರಿ ಹಳ್ಳಗಳ ಪ್ರವಾಹದಿಂದ ನಮಗೆಲ್ಲ ಅನ್ನ ನೀಡುವ ಅನ್ನದಾತನ ಲಕ್ಷಾಂತರ ಎಕರೆ ವಿವಿಧ ಬೆಳೆಗಳು ನೀರು ಪಾಲಾಗಿವೆ. ಅನೇಕ ಕಡೆ ಊರು, ಕೇರಿ, ಮನೆಗಳಿಗೆ ನೀರು ನುಗ್ಗಿ ಜನ, ಜಾನುವಾರುಗಳು ಸಂಕಷ್ಟದಲ್ಲಿರುವ ಇಂತ ಸಂದಿಗ್ಧ ಸಮಯದಲ್ಲಿ ನಾನು ಸಂಭ್ರಮಾಚರಣೆಯನ್ನು ಮಾಡಿಕೊಳ್ಳುವುದು ಸರಿಯಲ್ಲ ಎಂದು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.
ಕಾರಣ ನನ್ನೆಲ್ಲಾ ಪ್ರೀತಿಯ ಬಂಧುಗಳೇ ನೀವು ಪ್ರತಿ ವರ್ಷದಂತೆ ಜನ್ಮದಿನದ ಶುಭ ಕೋರಿ ಹರಸಿ ಹಾರೈಸಿ ಆದರೆ ಸಂಭ್ರಮಾಚರಣೆ, ಹಾರ ತುರಾಯಿ, ಕೇಕು ಇದ್ಯಾವುದನ್ನು ತರದೆ ಅದೇ ಹಣ ಅಥವಾ ಅದೇ ಪ್ರೀತಿಯನ್ನು ಮತಕ್ಷೇತ್ರದಾದ್ಯಂತ ಪ್ರವಾಹದಿಂದ ಸಂಕಷ್ಟದಲ್ಲಿರುವ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸುವುದಾಗಲಿ, ಜನರಿಗೆ, ಜಾನುವಾರುಗಳಿಗೆ ಅನುಕೂಲ ಆಗುವಂತ ಯಾವುದಾದರೂ ಕೆಲಸ ಕಾರ್ಯಗಳನ್ನು ನೀವು ಮಾಡಿದರೆ ನಿಜಕ್ಕೂ ನನ್ನ ಜನ್ಮದಿನ ಆಚರಿಸಿದ್ದಕ್ಕೂ ಸಾರ್ಥಕತೆ ಸಿಗಲಿದೆ. ಎಂದು ನಾನು ಸದಾ ನಿಮ್ಮೊಂದಿಗೆ ಇದ್ದೇನೆ. ಎಂದು ಹೇಳಿದರು.