ಬಿಜೆಪಿ ಪಕ್ಷದ ವತಿಯಿಂದ ಸೇವಾ ಪಾಕ್ಷಿಕ ಅಡಿಯಲ್ಲಿ ರಕ್ತದಾನ, ಆರೊಗ್ಯ ತಪಾಸಣೆ ಶಿಬಿರ

ಚಿತ್ತಾಪುರ : ಚಿತ್ತಾಪುರ ಬಿಜೆಪಿ ಮಂಡಲದ ವತಿಯಿಂದ ಪಂಡಿತ್ ದೀನ್ ದಯಾಳ ಉಪಾಧ್ಯಾಯ ಅವರ ೧೧೦ ನೇ ಜಯಂತಿ ಅಂಗವಾಗಿ ಸೇವಾ ಪಾಕ್ಷಿಕ ಕಾರ್ಯಕ್ರಮದ ಭಾಗವಾಗಿ ಪಟ್ಟಣದ ಅಕ್ಕಮಹಾದೇವಿ ಮಂದಿರದ ಅವರಣದಲ್ಲಿ ರಕ್ತದಾನ ಮತ್ತು ಆರೊಗ್ಯ ತಪಾಸಣಾ ಶಿಬಿರನ್ನು ಯಶಸ್ವಿಯಾಗಿ ಆಯೊಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸೇವಾ ಪಾಕ್ಷಿಕ ಸಂಚಾಲಕ ಶರಣಪ್ಪ ತಳವಾರ ಅವರು ಸೇವಾ ಪಾಕ್ಷಿಕ ಯೊಜನೆಯಡಿ ನಿರಂತರವಾಗಿ ನೂರಾರು ಕಾರ್ಯಕ್ರಮಗಳು ನಡೆಯುತ್ತವೆ ಪಕ್ಷದ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬಂದಿರುವದು ಶ್ಲಾಘನೀಯ ಎಂದು ಹೇಳಿದರು.
ಮಂಡಲ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಮಾತನಾಡಿ ಜನುಮದಿನ ಆಚರಣೆಯನ್ನು ಅರ್ಥಪೂರ್ಣ ಮಾಡಲು ಪಕ್ಷವು ಆದೇಶ ನೀಡಿದೆ. ಇದರನ್ವಯ ಸ್ವಚ್ಚತೆ, ಸದ್ಭಾವನಾ, ವನ ಮಹೊತ್ಸವ, ರಕ್ತದಾನ ಮತ್ತು ಅರೊಗ್ಯ ಶಿಬಿರಗಳಂತಹ ಜನಪರ ಕಾರ್ಯಕ್ರಮಗಳನ್ನು ಆಯೊಜಿಸಲಾಗಿದೆ. ರಕ್ತದ ಕೊರತೆ ನೀಗಿಸಲು ದುಂದು ವೆಚ್ಚ ಮಾಡುವ ಬದಲು ಇಂತಹ ಸೇವೆಯನ್ನು ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸುರೇಶ ರಾಠೋಡ, ಶರಣು ಜ್ಯೊತಿ, ಆನಂದ ಪಾಟೀಲನರಿಬೊಳ, ನಾಗರಾಜ ಹೂಗಾರ, ಶಾಂತಕುಮಾರ ಮಳಖೇಡ, ಮಹೇಶ ಬಾಳಿ, ಶಿವರಾಜ ಚವ್ವಾಣ, ಪ್ರಸಾದ ಅವಂಟಿ, ಚಂದ್ರಶೇಖರ ಉಟಗೂರ, ಶಿವಕುಮಾರ ಶೀಲವಂತ, ಮಲ್ಲಿಕಾರ್ಜುನ ಇಟಗಿ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!