ಕಲಬುರಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಮೈಸೂರು ದಸರಾ ಮಹೋತ್ಸವ ಸಮಿತಿ-೨೦೨೫ ರಂದು ಮೈಸೂರು ದಸರಾ ಇವರುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ:೨೮.೦೯.೨೦೨೫ ಮಹೋತ್ಸವ-೨೦೨೫ ರಲ್ಲಿ ಕಲಬುರಗಿಯ ಸಾಹಿತಿಯಾಗಿರುವ ಶ್ರೀ ಪ್ರಮೋದ ಕರಣಂ ಇವರ ಮೂರನೇ ಕಾದಂಬರಿ “ಹುಟ್ಟು ಸಾವು ಎರಡರ ನಡುವೆ” ಯನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿರುವ ಡಾ. ಮಾನಸ ಇವರ ಅಧ್ಯಕ್ಷತೆಯಲ್ಲಿ ನಾಡಿನ ಖ್ಯಾತ ಸಾಹಿತಿಯಾಗಿರುವ ಶ್ರೀ ಎಂ. ಕೆ. ಹರಿಚರಣ ತಿಲಕ್ ಇವರು ಲೋಕಾರ್ಪಣೆಗೊಳಿಸುತ್ತಿದ್ದು, ಇದು ಕಲಬುರಗಿಯ ಯುವ ಬರಹಗಾರರಾಗಿರುವ ಶ್ರೀ ಪ್ರಮೋದ ಕರಣಂ ಇವರಿಗೆ ಸಲ್ಲುತ್ತಿರುವ ಗೌರವವಾಗಿರುತ್ತದೆ.
ಕಲಬುರಗಿ ಸಾಹಿತಿ ಪ್ರಮೋದ ಕರಣಂ ಇವರ ಮೂರನೇ ಕಾದಂಬರಿ “ಹುಟ್ಟು ಸಾವು ಎರಡರ ನಡುವೆ’ ಕನ್ನಡ ಪುಸ್ತಕ ಲೋಕಾರ್ಪಣೆ
