- ವಡಗೇರಾ ತಾಲೂಕಿನ ವಿವಿಧೆಡೆ ಬೆಳೆನಷ್ಟ ವೀಕ್ಷಣೆ
- ಬಿಜೆಪಿ ಯುವ ನಾಯಕ ಮಹೇಶರಡ್ಡಿ ಮುದ್ನಾಳ್ ಆಗ್ರಹ
ಯಾದಗಿರಿ: ಮಹಾರಾಷ್ಟ್ರದಿಂದ
ಭೀಮಾನದಿಗೆ ಅಧಿಕ ಪ್ರಮಾಣದ ನೀರು ಹರಿ ಬಿಟ್ಟಿರುವುದು ಮತ್ತು ಭಾರಿ ಮಳೆಯಿಂದ ಬೆಳೆನಷ್ಟವಾದ ಹಿನ್ನಲೆಯಲ್ಲಿ ಬಿಜೆಪಿ ಯುವ ನಾಯಕ ಮಹೇಶರಡ್ಡಿ ಮುದ್ನಾಳ್ ಶುಕ್ರವಾರ ವಡಗೇರಾ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಭೇಟಿ ನೀಡಿ, ರೈತರ ಅಳಲು ಆಲಿಸಿದರು.
ಮೊದಲು ಹಾಲಗೇರಾ, ಗೋಡಿಹಾಳ, ಕುಮನೂರು ಗ್ರಾಮಗಳಿಗೆ ಭೇಟಿ ನೀಡಿ ರೈತರು ಬೆಳೆದ ಹತ್ತಿ ಬೆಳೆ ಹಾಳಾಗಿದ್ದನ್ನು ವೀಕ್ಷಿಸಿದರು. ಈ ವೇಳೆ ರೈತರು ಲಕ್ಷಾಂತರ ರೂ.ಸಾಲ ಮಾಡಿ ಬೆಳೆದಿದ್ದು ಎಲ್ಲವೂ ನೀರು ಪಾಲಾಗಿದೆ. ನಾವು ವಿಷ ಕುಡಿಯುವುದು ಒಂದೆ ದಾರಿ ಉಳಿದಿದೆ ಎಂದು ಕಣ್ಣೀರಿಟ್ಟರು. ಪ್ರತಿ ಎಕರೆಗೆ ಸಾವಿರಾರು ರೂ.ಖರ್ಚು ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ನಂತರ ಬೂದನಾಳ ಸೇತುವೆ ಮಳೆ ಕಾರಣದಿಂದ ಜಲಾವೃತಗೊಂಡಿದ್ದು ಇದರಿಂದ ಮಾಚನೂರ, ಶಿವನೂರು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದ್ದನ್ಬು ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ಮಳೆಯಿಂದ ಮತಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಬೆಳೆನಷ್ಟವಾಗಿದೆ. ಆದರೆ, ರಾಜ್ಯ ಸರ್ಕಾರ ಈ ಬಗ್ಗೆ ಕಿಂಚಿತ್ತೂ ಯೋಚನೆ ಮಾಡುತ್ತಿಲ್ಲ. ಸಮೀಕ್ಷೆ ಮಾಡುವುದು ಬಿಟ್ಟು ಮೊದಲು ಬೆಳೆ ಸಮೀಕ್ಷೆ ನಡೆಸಿ, ರೈತರಿಗೆ ಹೆಚ್ಚಿನ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಗ್ಯಾರಂಟಿ ಯೋಜನೆಗಳಲ್ಲೇ ಕಾಲ ಕಳೆಯುತ್ತಿರುವ ಸರ್ಕಾರ ರೈತರ ಸಂಕಷ್ಟಕ್ಕೆ ಆಲಿಸುತ್ತಿಲ್ಲ. ಈ ಭಾಗದಲ್ಲಿ ರೈತರು ವಾಣಿಜ್ಯ ಬೆಳೆ ಹತ್ತಿಯನ್ನು ಹೆಚ್ಚು ಬೆಳೆಯುತ್ತಾರೆ. ಆದರೆ, ಮಳೆಯಿಂದ ಇಡೀ ಬೆಳೆ ಸರ್ವನಾಶವಾಗಿದೆ. ಕೋಟ್ಯಾಂತರ ರೂ. ಬೆಳೆ ಹಾನಿಯಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಸೊನ್ನದ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರುಕುಂದ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ ಕಾಡಂನೋರ , ವೀರುಪಾಕ್ಷಪ್ಪಗೌಡ ಮಾಚನೂರ,ಗೌರೀಶಂಕರ ಹೀರೆಮಠ ,
ಸಂಗರಡ್ಡಿಗೌಡ ಗೋಡಿಹಾಳ,ಶಿವಣ್ಣಗೌಡ ಕಂದಳ್ಳಿ , ಮಲ್ಲುಗೌಡ ಪೋ ಪಾಟೀಲ್,ಲಕ್ಮೀಪುತ್ರ ಯಾದಗಿರಿ , ಬಾಬುಗೌಡ ನಾಯ್ಕಲ್, ಜಗನಾಥರಡ್ಡಿ ಹಾಲಗೇರಾ ,
ಶಿವುಕುಮಾರ ಕೊಂಕಲ್ ,ಮಲ್ಲು ಕಲ್ಮನಿ, ಶರಣಗೌಡ ಹಾಲಗೇರಾ , ಕುಮಲಪ್ಪ ಕುಮನೂರ ,ವಿಜಯಕುಮಾರ ಕುಮನೂರ , ಪ್ರಶಾಂತರಡ್ಡಿ ಹಾಲಗೇರಾ , ಹೊನ್ನಪ್ಪಕಡೆಚೂರ ,ಸಾಬಯ್ಯ ಗುತ್ತೇದಾರ ,ಮಲ್ಲಪ್ಪ ಕುಮನೂರ ,ಮಲ್ಲು ಏರುಂಡಿ ,ವಿಶ್ವನಾಥರಡ್ಡಿಗೌಡ ಬಿಳ್ಹಾರ , ಮೋಹನರಡ್ಡಿಗೌಡ ಅರ್ಜುಣಗಿ ,ಮಲ್ಲಪ್ಪ,ರಂಗನಾಥ ಬಿಳ್ಹಾರ ,ಮರೆಪ್ಪ ಬಿಳ್ಹಾರ , ಹಾಗು ಇತರರು ಇದ್ದರು…
ರೈತರ ಕಣ್ಣೀರು ಒರೆಸಲು ನಾನು ಎಂಥ ಸಮಯ ಬಂದರೂ ನಿಲ್ಲುತ್ತೇನೆ. ಅಧಿಕಾರಿಗಳು ಬೆಳೆ ಸಮೀಕ್ಷೆ ಮಂದಗತಿಯಲ್ಲಿ ನಡೆಯುತ್ತಿದೆ. ರಾಜ್ಯ ಸರ್ಕಾರ ರಾಜ್ಯ ರೈತರನ್ನು ನಿರ್ಲಕ್ಷಿಸುತ್ತಿದ್ದಾರೆ
– ಮಹೇಶರಡ್ಡಿ ಮುದ್ನಾಳ್
ಬಿಜೆಪಿ ಯುವ ನಾಯಕ