ವಚನ ಸಾಹಿತ್ಯ ಕನ್ನಡದ ಸಾಹಿತ್ಯ ಪ್ರಕಾರಗಳಲ್ಲಿ ಪ್ರಮುಖವಾಗಿದೆ-ಪ್ರಶಾಂತ
ಸುರಪುರ: ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಒಂದಾಗಿದೆ. ವಚನ ಎಂದರೆ ಪ್ರಮಾಣ, ಮಾತು ಎಂದರ್ಥ. ವಚನಗಳು ಚಿಕ್ಕ ಚಿಕ್ಕ ಗದ್ಯದ ತುಣುಕುಗಳಾಗಿದ್ದು, ಅನುಭಾವ ಮತ್ತು ಸಾಮಾಜಿಕ ಕಾಳಜಿಯನ್ನು ವ್ಯಕ್ತಪಡಿಸುತ್ತವೆ ಎಂದು ಶ್ರೀ ವೀರಪ್ಪ ನಿಷ್ಠಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ಪ್ರಶಾಂತ ಸೇರಿಕಾರ ಮಾತನಾಡಿದರು. ನಗರದ ನಿಷ್ಠಿ ಕಡ್ಲೆಪ್ಪನವರ ವಿರಕ್ತ ಮಠದಲ್ಲಿ ಜರುಗಿದ ಶ್ರಾವಣ ಶ್ರವಣ ಶಿವಾನುಭವ ಚಿಂತನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಬಸವಣ್ಣನವರು ವಚನ ಚಳುವಳಿಯ ಪ್ರಮುಖ ನಾಯಕರಾಗಿದ್ದರು. ಅವರು ಅನುಭವ ಮಂಟಪ ಎಂಬ…


