ಹಾಲುಮತ ಗುರು ಪಿಠದ ಶಾಂತಮಯ ಶ್ರೀಗಳ 33ನೇ ಹುಟ್ಟು ಹಬ್ಬ ಆಚರಣೆ
ಯಾದಗಿರಿ: ಮನುಷ್ಯ ಜೀವಿತಾವಧಿಯಲ್ಲಿ ಸಮಾಜಮುಖಿ ಹಾಗೂ ಪರೋಪಕಾರಿ ಕೆಲಸಗಳನ್ನು ಮಾಡಿದಾಗ ಮಾತ್ರ ಜಿವನ ಸಾರ್ಥಕವಾಗುತ್ತದೆ ಎಂದು ಸಿರುಗುಪ್ಪದ ಪರಮಪೂಜ್ಯ ಶ್ರೀ ಕೈವಲ್ಯಾನಂದ ಮಹಾಸ್ವಾಮಿಗಳು ನುಡಿದರು. ಹುಣಸಗಿ ತಾಲೂಕಿನ ಅಗತಿರ್ಥ ಗ್ರಾಮದಲ್ಲಿ ಶ್ರೀ ಮಠದ ಭಕ್ತರಿಂದ ಹಮ್ಮಿಕೊಂಡಿದ್ದ ಶ್ರೀ ಮದ್ ಜಗದ್ಗುರು ರೇವಣಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮಿಗಳ 33ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶಾಂತಮಯ ಶ್ರೀಗಳು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಆಧ್ಯಾತ್ಮದಲ್ಲಿ ಹೆಚ್ಚಿನ ಪರಿಣಿತಿ ಪಡೆದು ಗ್ರಾಮೀಣ ಭಾಗದಲ್ಲಿ ಹಲವಾರು…


