ಮಹಿಳಾ ವಾರಿಯರ್ಸ್ ಎಂಬ ವಿಷಯದ ಮೇಲೆ ವಿಶೇಷ ವಿಚಾರ ಸಂಕೀರ್ಣ ಕಾರ್ಯಕ್ರಮ

ಕಲಬುರಗಿ :  ಶ್ರೀಮತಿ, ವೀರಮ್ಮ ಗಂಗಸಿರಿ ಮಹಿಳಾ ಪದವಿ ಕಾಲೇಜಿನಲ್ಲಿ ಇಂದು ಮಹಿಳಾ ವಾರಿಯರ್ಸ್ ಎಂಬ ವಿಷಯದ ಮೇಲೆ ವಿಶೇಷ ವಿಚಾರ ಸಂಕೀರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಣಿ ಅಬ್ಬಕ್ಕದೇವಿ , ಕಿತ್ತೂರು ರಾಣಿ ಚೆನ್ನಮ್ಮ ಮತ್ತು ರಾಣಿ ಅಹ್ಯಾಲಾ ಬಾಯಿ ಹೋಳ್ಕರ್ ರವರ ಜೀವನ ಮತ್ತು ಸಾಧನೆ ಗಳ ಬಗ್ಗೆ ಡಾ . ಭವ್ಯ ದೀಪ್ತಿ ರವರು ಮಾತನಾಡಿದರು. ಈ ಕಾರ್ಯದ ಅಧ್ಯಕ್ಷತೆಯನು ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್. ಬಿ. ಕೊಂಡಾ  ಅವರು ವಹಿಸಿ ಕಾರ್ಯಕ್ರಮದ ಬಗ್ಗೆ…

Read More

ಬಯಲಲ್ಲಿ ಬಾನಾಡಿ ಕೃತಿ ಲೋಕಾರ್ಪಣೆ

ಕಲಬುರಗಿ: ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ವೀರಮ್ಮ ಗಂಗಸಿರಿ ಮಹಿಳಾ ಪದವಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ “ಬಯಲಲ್ಲಿ ಬಾನಾಡಿ” ಕೃತಿಯ ಲೋಕಾರ್ಪಣೆ ಸಮಾರಂಭವು ಭಾನುವಾರ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಸಿದ್ದಾರಾಮ ಹೊನ್ಕಲ್ ಅವರು ಹೆಚ್ಚು ಹೆಚ್ಚು ಸೃಜನಶೀಲ ಸಾಹಿತ್ಯ ಹೊರಬರಬೇಕು, ಓದುಗರಿಗೆ ಉತ್ತಮ ಸಾಹಿತ್ಯ ದೊರೆಯಲಿ ಎಂದು ಹಾರೈಸಿದರು. ಸಿದ್ದಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಪ್ರಕಾಶಕರು ಡಾ. ಬಸವರಾಜ ಕೊನೇಕ ಅವರು ನಮ್ಮ ಸಂಸ್ಥೆ ಸದಾ ಕೈಗೆಟುಕುವ ದರದಲ್ಲಿ ಪುಸ್ತಕ ಮುದ್ರಿಸಿ ಪ್ರಕಟಿಸುವುದಕ್ಕೆ…

Read More

ಕೇವಲ ೬೦ ನಿಮಿಷದಲ್ಲಿ ೩೦ ಕವನಗಳನ್ನು ಬರೆದು ದಾಖಲೆ

ಕಲಬುರಗಿ: ಶಹಬಾದ ತಾಲೂಕಿನ ಹೊನಗುಂಟಿ ಗ್ರಾಮದ ದಾನೇಶ್ವರಿ ವಾರಕರ್  ಅವರು ಇತ್ತೀಚೆಗೆ ಮನೆಯಲ್ಲಿ ಕುಳಿತು ಸ್ವಂತ ರಚನೆಯ ಹಿಂದಿ ಕವನಗಳನ್ನು ಕೇವಲ ೬೦ ನಿಮಿಷದಲ್ಲಿ ೩೦ ಕವನಗಳನ್ನು ಬರೆದು ದಾಖಲೆ ಮಾಡಿದ್ದಾಳೆ. ಹರಿಯಾಣ ರಾಜ್ಯದ ಇಂಡಿಯಾ ಬುಕ್. ಆಫ್ ರಿಕಾರ್ಡಗೆ ಭಾಜನರಾಗಿ ಪ್ರಶಸ್ತಿಯನ್ನು  ಪಡದಿದ್ದಾರೆ. ದಾನೇಶ್ವರಿ ಅವರನ್ನು ಕಾಂಗ್ರೆಸ್ ಮುಖಂಡರಾದ ಶಿವಾನಂದ ಹೋನಗುಂಟಿ ಅವರು ನೇತೃತ್ವದಲ್ಲಿ ಕಲಬುರಗಿಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಈರಣ್ಣ ಪಾಟೀಲ ಝಳಕಿ, ಅಶ್ವಿನ ಸಂಕಾ, ಪರಶುರಾಮ ನಾಟೀಕಾರ, ವಿಶ್ವನಾಥ ಸೌಕಾರ ಹೋನಗುಂಟಿ,…

Read More

ಪ್ರತಿವರ್ಷದಂತೆ ಶ್ರೀ ವಿಶ್ವಕರ್ಮ ಜಯಂತಿಯನ್ನು ಅರ್ಥಪೂರ್ಣವಾಗಿ  ಆಚರಿಸಲು ಸೂಚನೆ

 ಕಲಬುರಗಿ: ಪ್ರತಿವರ್ಷದಂತೆ ಈ ವರ್ಷವೂ ಕೂಡ ವಿಜೃಂಭಣೆಯಿಂದ ಶ್ರೀ ವಿಶ್ವ ಕರ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಧಿಕಾರಿ ಕಚೇರಿಯ ಶೀಷ್ಟಾಚಾರ ತಹಶೀಲ್ದಾರ್ ಪಂಪಯ್ಯ. ಅವರು ಅಧಿಕಾರಿಗಳಗೆ  ಸೂಚನೆ ನೀಡಿದರು. ಇತ್ತೀಚಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶ್ರೀ ವಿಶ್ವಕರ್ಮ ಜಯಂತಿ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೆಪ್ಟಂಬರ್ ೧೭ ರಂದು ರಂಗಮಂದಿರದಲ್ಲಿ   ಮದ್ಯಾಹ್ನ  ೦೩  ಗಂಟೆಗೆ  ನಡೆಯುವ ಕಾರ್ಯಕ್ರಮಕ್ಕೆ ಎಲ್ಲಾ ಸರಕಾರಿ ಅರೆಸರಕಾರಿ  ಕಚೇರಿಗಳಲ್ಲಿ ಬೆಳಿಗ್ಗೆ ೯ ಗಂಟೆಗೆ ಆಚರಿಸಬೇಕು ಮತ್ತು ಸರಕಾರಿ ಶಾಲಾ ಕಾಲೇಜುಗಳಲ್ಲಿ ಹಾಗೂ…

Read More

ಸೆ.10 ರಂದು ಡಾ. ಎಸ್.ಎಂ.ಪಂಡಿತ ರಂಗಮಂದಿರದ ನವೀಕರಣ ಕಾಮಗಾರಿಯ ಉದ್ಘಾಟನಾ ಸಮಾರಂಭ

ಕಲಬುರಗಿ, : ಕಲಬುರಗಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ 2024-25ನೇ ಮತ್ತು 2025-26ನೇ ಸಾಲಿನ ಕೆ.ಕೆ.ಆರ್.ಡಿ.ಬಿ. ಮ್ಯಾಕ್ರೋ ಯೋಜನೆ ಅಡಿಯಲ್ಲಿ ಡಾ. ಎಸ್.ಎಂ.ಪಂಡಿತ ರಂಗಮಂದಿರದ ನವೀಕರಣ ಕಾಮಗಾರಿಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 10 ರಂದು ಬುಧವಾರ ಬೆಳಿಗ್ಗೆ 10.30 ಗಂಟೆಗೆ ಕಲಬುರಗಿಯ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜರುಗಲಿದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ರಾಜ್ಯಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಘನ ಉಪಸ್ಥಿತಿ ವಹಿಸುವರು. ರಾಜ್ಯದ ಗ್ರಾಮೀಣಾಭಿವೃದ್ಧಿ…

Read More

ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿಗೆ ಕಲಬುರಗಿಯ ಡಾ. ಫಾರುಕ್ ಮಣ್ಣೂರ ಆಯ್ಕೆ

ಕಲಬುರಗಿ: ಕಲಬುರಗಿ ನಗರದ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರುಕ್ ಮಣ್ಣೂರ ಅವರು ಕಡಿಮೆ ಅವಧಿಯಲ್ಲಿ ಆರೋಗ್ಯ ಕ್ಷೇತ್ರದ ಹಾಗೂ ಸಾಮಾಜಿಕ ಕ್ಷೇತ್ರದ ಸಾಧನೆಯನ್ನು ಗುರುತಿಸಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಲಂಡನ ವತಿಯಿಂದ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.ಸೆಪ್ಟೆಂಬರ್ 13, 2025 ರ ಶನಿವಾರ ಮಧ್ಯಾಹ್ನ 12:00 ರಿಂದ ಸಂಜೆ 4:00 ರವರೆಗೆ ಲಂಡನ್ನ ನಲ್ಲಿರುವ ವೆಸ್ಟ್ಮಿನಿಸ್ಟರ್ ಅರಮನೆಯ ಹೌಸ್ ಆಫ್ ಕಾಮನ್ಸ್ನಲ್ಲಿ ಸದಸ್ಯರ ಊಟದ ಕೋಣೆಯಲ್ಲಿ ನಡೆಯಲಿರುವ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ…

Read More

ದಸರಾ ಮತ್ತು ದೀಪಾವಳಿ ಹಬ್ಬ-2025 ವಿಶೇಷ ರೈಲುಗಳ ಸಂಚಾರ

ಕಲಬುರಗಿ, -ಮುಂಬರುವ ದಸರಾ ಹಾಗೂ ದೀಪಾವಳಿ ಹಬ್ಬ-2025ರ ಸಂದರ್ಭದಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸೋಲಾಪುರ ವಿಭಾಗದಿಂದ ಕೇಂದ್ರ ರೈಲ್ವೆ ಇಲಾಖೆಯು ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ವಿಭಾಗದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದೌಂಡ್-ಕಲಬುರಗಿ ರೈಲು: ವಾರದಲ್ಲಿ 5 ದಿನಗಳು ಕಾಯ್ದಿರಿಸದ ವಿಶೇಷ (ರೈಲು ಸಂಖ್ಯೆ 01421) ಸೆಪ್ಟೆಂಬರ್ 26 ರಿಂದ ಡಿಸೆಂಬರ್ 1 ರವರೆಗೆ ಪ್ರತಿ ಸೋಮವಾರ, ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಬೆಳಿಗ್ಗೆ 5 ಗಂಟೆಗೆ…

Read More

ಹೋರಟೂರು ಗ್ರಾಮದಲ್ಲಿ ಶಾಲಾ ಅಭಿವೃದ್ಧಿ ಕಾಮಗಾರಿಗಳಿಗೆ-ಇಓ ಸಂಗ್ವಾರ ಚಾಲನೆ

ವಡಗೇರಾ: ಮಕ್ಕಳ ಸ್ನೇಹಿ ಶಾಲಾ ವಾತಾವರಣ ನಿರ್ಮಿಸಲು ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸಮಗ್ರ ಶಾಲಾ ಅಭಿವೃದ್ಧಿ ಕಾಮಗಾರಿಗಳಿಗೆ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಪಂ ಅಧ್ಯಕ್ಷರಿಂದ ಚಾಲನೆ ನೀಡಿದರು. ತಾಲ್ಲೂಕಿನ ಉಳ್ಳೆಸೂಗುರು ಗ್ರಾಪಂ ವ್ಯಾಪ್ತಿಯ ಹೊರಟರು ಗ್ರಾಮದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಜಿಲ್ಲಾ ಪಂಚಾಯಿತಿಯಿಂದ ಹಮ್ಮಿಕೊಂಡಿದ್ದ “ನಮ್ಮ ಶಾಲೆ ನಮ್ಮ ಅಭಿಯಾನದಡಿ” ಶಾಲಾ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಈ ಅಭಿಯಾನದಡಿ ತಾಲೂಕಿನ ಉಳ್ಳೆಸೂಗುರು, ಐಕೂರು, ಹೈಯಾಳಿ (ಬಿ), ಟಿ…

Read More

ಕಲಬುರಗಿ ಜಿಲ್ಲೆಯಲ್ಲಿ ಬೆಳೆಹಾನಿ-ಸಮೀಕ್ಷೆ ನಡೆಸಿ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ

ಮುಖ್ಯಮಂತ್ರಿಗಳಿಂದ ಮಳೆಹಾನಿ ಬಗ್ಗೆ ಚರ್ಚೆ: ಕಲಬುರಗಿ :  ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆದ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಜಿಲ್ಲೆಗಳಲ್ಲಿ ಅತಿವೃಷ್ಠಿಯಿಂದ ಹಾನಿಯಾಗಿರುವ ಬೆಳೆ ನಷ್ಟದ ಅಂದಾಜನ್ನು ಸಮೀಕ್ಷೆ ಮಾಡಿ 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದ್ದು, ಅದರಂತೆ ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿರುವ ನಷ್ಟವನ್ನು ಸಮೀಕ್ಷೆ ಮಾಡಲು ತಕ್ಷಣದ ಕ್ರಮ ಕೈಗೊಳ್ಳುವಂತೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ…

Read More

ರಾಣಿಯರಾದ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ, ಅಹಲ್ಯೆ ಬಾಯಿಯರ ಸಾಹಸ ಮಹಿಳೆಯರಿಗೆ ಸ್ಪೂರ್ತಿ | ಡಾ ಮೇಘಾ ಖಂಡೇಲವಾಲ

ಕಲಬುರ್ಗಿ : ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದರು. ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದ ಉಲ್ಲಾಳದ ರಾಣಿ ಅಬ್ಬಕ್ಕ ಜೀವನ, ಶೌರ್ಯ, ಸಾಹಸ ಇಂದಿನ ಮಹಿಳೆಯರಿಗೆ ಸ್ಫೂರ್ತಿ. ಅಬ್ಬಕ್ಕಳ ಸ್ವಾಭಿಮಾನ, ಧೈರ್ಯ ಇಂದಿನ ಮಹಿಳೆಯರಲ್ಲಿ ಇರಬೇಕು ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಗಣಿತ ವಿಭಾಗದ ಮುಖ್ಯಸ್ಥರಾದ ಡಾ ಮೇಘಾ ಖಂಡೇಲವಾಲ ಹೇಳಿದರು. ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಮಹಾವಿದ್ಯಾಲಯದ ಮಹಿಳಾ ಕೋಶ, ಕೇಂದ್ರೀಯ ವಿಶ್ವವಿದ್ಯಾಲಯ ಕರ್ನಾಟಕ ಹಾಗೂ ಅಖಿಲ ಭಾರತೀಯ…

Read More
error: Content is protected !!