ನ.30 ರಂದು ನಂದಿಕೂರ ಗ್ರಾಮದಲ್ಲಿ ಡಾ| ಬಿ.ಆರ್. ಅಂಬೇಡ್ಕರ ಅವರ ಪ್ರತಿಮೆ ಅನಾವರಣ ಸಮಾರಂಭ
ಕಲಬುರಗಿ : ತಾಲೂಕಿನ ನಂದಿಕೂರ ಗ್ರಾಮದಲ್ಲಿ ನ.30 ರವಿವಾರ ರಂದು ಸಂವಿಧಾನ ಶಿಲ್ಪಿ ಭಾರತ ರತ್ನ ಬಾಬಾ ಸಾಹೇಬ ಡಾ| ಬಿ.ಆರ್. ಅಂಬೇಡ್ಕರ ರವರ ಪಂಚಲೋಹದ ಪ್ರತಿಮೆ ಅನಾವರಣ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ದಿನೇಶ ದೊಡ್ಡಮನಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅವರು ನಗರದ ಪತ್ರಿಕಾಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಎಂ. ಖರ್ಗೆ ರವರು ಉದ್ಘಾಟನೆ ಮಾಡಲಿದ್ದಾರೆ. ಪೂಜ್ಯಭಂತೆ ವರಜ್ಯೋತಿ ಸಾನಿಧ್ಯ ವಹಿಸಲ್ಲಿದ್ದಾರೆ. ನೀಲಿಧ್ವಜ ಮತ್ತು ಪಂಚಶೀಲ ಧ್ವಜಾರೋಹಣ ಸಂಸದ ರಾಧಾಕೃಷ್ಣ…


