ಗುರುಮಠಕಲ್ ನಲ್ಲಿ ಧಾರ್ಮಿಕ ಸಂಭ್ರಮದಲ್ಲಿ ಮಹಾಲಕ್ಷ್ಮಿ ಹಾಗೂ ಭವಾನಿಮಾತೆಯ ಪೂಜೆ
ಗುರುಮಠಕಲ್ ಪಟ್ಟಣದಲ್ಲಿ ನವರಾತ್ರಿ ಉತ್ಸವ ಭಕ್ತಿಭಾವದಿಂದ ಮತ್ತು ವೈಭವದಿಂದ ಜರಗಿತು. ಗುರುಮಠಕಲ್: ಪಟ್ಟಣದ ಲಕ್ಷೀನಗರ ಬಡಾವಣೆಯ ಮಹಾಲಕ್ಷ್ಮಿ ದೇವಾಲಯದಲ್ಲಿ ಭಕ್ತಿಪೂರ್ಣ ಲಕ್ಷ್ಮಿ ದೇವಿಯ ಮತ್ತು ಅಂಕಮ್ಮ ದೇವಸ್ಥಾನದಲ್ಲಿ ಹಾಗೂ ಗಣೇಶ ಮಂದಿರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಗುರುಮಠಕಲ್ ಯುವ ಮುಖಂಡ ರಾಜ ರಮೇಶ್ ಗೌಡ ಅವರು ವಿಶೇಷ ಪೂಜೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದರು. ಭಕ್ತಿಪೂರ್ಣ ವಾತಾವರಣದಲ್ಲಿ ನೂರಾರು ಭಕ್ತರು ಭಾಗವಹಿಸಿ ದೇವಿಯ ಕೃಪೆಗೆ ಪ್ರಾರ್ಥಿಸಿದರು. ಪಟ್ಟಣದ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ಅಂಕಮ್ಮ ದೇವಾಲಯ…


